ಶಾಸಕ ಹರತಾಳು ಹಾಲಪ್ಪನವರ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಯಿಂದ ಹೊಸನಗರ ಹಾಳು ಕೊಂಪೆಯಾಗುತ್ತಿದೆ: ಬೇಳೂರು ಗೋಪಾಲಕೃಷ್ಣ

0
754

ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರಿಗೆ ಬಡಜನರ ಬಗ್ಗೆ ಕಾಳಗಿ ಇಲ್ಲ ರೈತರ ಬಗ್ಗೆ ಸ್ವಲ್ಪವೂ ಕಾಳಗಿ ಇಲ್ಲದೇ ಹೊಸನಗರದ ಎಪಿಎಂಸಿಯನ್ನು ಸಾಗರಕ್ಕೆ ಮೀಲಿನ ಮಾಡುವ ಪ್ರಕ್ರಿಯೆ ನಡೆಸಲಾಗಿದ್ದು ಹಾಲಪ್ಪನವರೇ ಶಾಸಕರಾಗಿ ಮುಂದುವರೆದರೇ ಹೊಸನಗರ ತಾಲ್ಲೂಕು ಹಾಳು ಕೊಂಪೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಹೊಸನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಎಪಿಎಂಸಿಯನ್ನು ಸಾಗರಕ್ಕೆ ಹಸ್ತಾಂತರಿಸುವುದು ಮತ್ತು ಮಾವಿನಕೊಪ್ಪದಿಂದ ಬೈಪಾಸ್ ರಸ್ತೆಯನ್ನು ಮಾಡುವುದನ್ನು ವಿರೋಧಿಸಿ ಎಪಿಎಂಸಿ ಮುಂಭಾಗ ರಸ್ತೆ ತಡೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದ್ದು ಈ ಸಭೆಯಲ್ಲಿ ಮಾತನಾಡಿದರು.

ಹೊಸನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 3ಕೋಟಿ ರೂ.ನಷ್ಟು ವ್ಯವಹಾರ ನಡೆಸಲಾಗುತ್ತಿದ್ದು ಆದರೆ ಸೊರಬ ಕೃಷಿ ಮಾರುಕಟ್ಟೆಯಲ್ಲಿ ಸುಮಾರು 60ಲಕ್ಷ ರೂ.ನಷ್ಟು ವ್ಯವಹಾರ ನಡೆಸಲಾಗುತ್ತದೆ. ಸೊರಬ ಎಪಿಎಂಸಿಯನ್ನು ಹಸ್ತಾಂತರಿಸದೆ ಹೊಸನಗರ ಎಪಿಎಂಸಿಯನ್ನು ಮಾತ್ರ ಹಸ್ತಾಂತರಿಸಲು ಹೊರಟಿರುವುದು ಹಾಲಪ್ಪನವರು ರೈತರಿಗೆ ಮಾಡುತ್ತಿರುವ ಅವಮಾನ. ಅದೇ ರೀತಿ ಮೊದಲೇ ಪಟ್ಟ ಸುಂದರವಾದ ಹೊಸನಗರ ಬೈಪಾಸ್ ರಸ್ತೆ ಮಾಡಿ ಜನರ ಜೀವನದ ಜೊತೆ ಚಲ್ಲಾಟ ವಾಡುತ್ತಿರುದಲ್ಲದೆ ಎರಡು ವರ್ಷಗಳಿಂದ ಕೊರೊನಾದಿಂದ ವ್ಯಾಪಾರವಿಲ್ಲದೆ ಅಂಗಡಿ ಮಾಲೀಕರು ತತ್ತರಿಸಿ ಬೈಪಾಸ್ ರಸ್ತೆಯಾದರೇ ಅಂಗಡಿಗಳಿಗೆ ವ್ಯಾಪಾರವಿಲ್ಲದೆ ವ್ಯಾಪಾರಸ್ತರು ಸಾಯುತ್ತಾರೆ. ಏನೇ ಅದರೂ ನಾವು ಎಪಿಎಂಸಿ ಹಸ್ತಾಂತರ ಮತ್ತು ಬೈಪಾಸ್ ರಸ್ತೆ ಮಾಡಲು ಬಿಡುವುದಿಲ್ಲ. ಹೊಸನಗರ ಕ್ಷೇತ್ರದ ಜನರೊಂದಿಗೆ ನಾನು ಮತ್ತು ನಮ್ಮ ಪಕ್ಷ ಇರುತ್ತಾದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲಗೋಡು ರತ್ನಾಕರ್, ರಾಜನಂದಿನಿ, ಜಯಶೀಲಪ್ಪ ಗೌಡ, ಬಿ.ಜಿ. ನಾಗರಾಜ್, ಸದಾಶಿವ ಶ್ರೇಷ್ಠಿ, ಚಂದ್ರಮೌಳಿ, ಎರಗಿ ಉಮೇಶ್ ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಶೋಕಗೌಡ, ಈಶ್ವರಪ್ಪ, ಕರುಣಕರ ಶೆಟ್ಟಿ, ಜಯನಗರ ಗುರು, ಗುರುರಾಜ್, ಮಂಜುನಾಥ್, ಬಂಡಿ ರಾಮಚಂದ್ರ, ಕೃಷ್ಣಮೂರ್ತಿ, ಎಂ.ಪಿ ಸುರೇಶ್, ಸಣ್ಣಕ್ಕಿ ಮಂಜು, ಗೋಪಿ ಬಸವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here