ಶಾಸಕ ಹರತಾಳು ಹಾಲಪ್ಪ ಮರಳು ಲಾರಿ ಮಾಲೀಕರಿಂದ ಹಣ ಪಡೆದಿರೋದು ನೂರಕ್ಕೆ ನೂರರಷ್ಟು ಸತ್ಯ, ಆ ಮಂಜುನಾಥನೇ ನೋಡಿಕೊಳ್ಳಲಿ ; ಬೇಳೂರು ಗೋಪಾಲಕೃಷ್ಣ

0
584

ಸಾಗರ: ಶಾಸಕ ಹರತಾಳು ಹಾಲಪ್ಪ ನೂರಕ್ಕೆ ನೂರರಷ್ಟು ಮರಳು ಲಾರಿ ಮಾಲೀಕರಿಂದ ಹಣ ಪಡೆದಿರೋದು ಸತ್ಯ. ಆಣೆ-ಪ್ರಮಾಣ ಮಾಡುವಾಗ ಇಲ್ಲಿ ಇರುತ್ತೇನೆ ಅಂತ ಹೇಳಿದ್ದರು. ನಮಗೂ ಮೊದಲು ಆಣೆ-ಪ್ರಮಾಣ ಮಾಡಿ ಅವರು ಹೋಗಿದ್ದಾರಂತೆ. ನಾ ಪ್ರಮಾಣ ಮಾಡಿಲ್ಲ ಅಂತ ಹೇಳಿದ್ದಾರಂತೆ.

ಆ ಮಂಜುನಾಥನೇ ನೋಡಿಕೊಳ್ಳಲಿ. ನನ್ನ ಆರೋಪಕ್ಕೆ ನಾನು ಬದ್ಧ. ಪಲಾಯನ ಮಾಡೋ ಪ್ರಶ್ನೆಯೇ ಇಲ್ಲ. ಹಾಲಪ್ಪ ಹಣ ಪಡೆದಿರೋದು ನಿಜ ಎಂಬುದಾಗಿ ಆಣೆ-ಪ್ರಮಾಣವನ್ನು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿದ್ದಾರೆ.

 

ಇಂದು ನಿಗದಿಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಾನಕ್ಕೆ ತೆರಳಿದಂತ ಅವರು, ದೇವರ ಮುಂದೆ ತಾವು ಮಾಡಿರುವಂತ ಆರೋಪ ನಿಜವೆಂದು ಆಣೆ-ಪ್ರಮಾಣ ಮಾಡಿದ್ದಾರೆ. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಡೀ ರಾಜ್ಯ ನೋಡ್ತಾ ಇದೆ. ಈ ಪ್ರಸಿದ್ಧ ಸ್ಥಳ ನಂಬಿಕೆಯ ಮೂಲ ಸ್ಥಳ. ಇಲ್ಲಿ ನಾನು ಏನು ಮಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಆ ಮಂಜುನಾಥನೇ ಸಾಕ್ಷಿ. ನಾನು ಹೇಳುವುದು ಇಷ್ಟೇ, ವಿರೋಧ ಪಕ್ಷದವನಾಗಿ ಆಪಾದನೆ ಮಾಡಿದ್ದೇನೆ. ಇಲ್ಲಿ ದುಡ್ಡು ಕೊಟ್ಟವರು ಇದ್ದಾರೆ. ಅವರು ದುಡ್ಡು ಪಡೆದಿಲ್ಲ ಅಂತ ಪ್ರಮಾಣ ಮಾಡಿದ್ದಾರೆ. ಅದು ಮಂಜುನಾಥನೇ ನೋಡಿಕೊಳ್ಳಬೇಕು ಎಂದರು.

 

 

10 ರಿಂದ 12 ಗಂಟೆ ಸಮಯ ನಿಗದಿ ಪಡಿಸಲಾಗಿತ್ತು. ನಾನು ಫಲಾಯನ ಮಾಡುವ ಪ್ರಶ್ನೆಯೇ ಇಲ್ಲ. ನೂರಕ್ಕೆ ನೂರರಷ್ಟು ಸತ್ಯ. ಅವರು ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಅವರ ಪರವಾಗಿ ಒಂದಷ್ಟು ಜನರು ಸಾಕ್ಷಿ ಹೇಳೋದಕ್ಕೆ ಬರಬಹುದು ಎಂದರು.

 

 

ಇಲ್ಲೇ ಕೊಟ್ಟಿರುವಂತ ಲಾರೀ ಮಾಲೀಕರು ಇದ್ದಾರೆ. ಅವರನ್ನು ಮುಂದಿಡೋದಕ್ಕೆ ಹೋಗೋದಿಲ್ಲ. ನನಗೆ ಪೋನ್ ಮಾಡಿ 60 ರಿಂದ 70 ಮಂದಿ ಹೇಳಿದ್ದಾರೆ. ಅವರ ಶಿಷ್ಯ ವಿನಾಯಕ್ ಭಟ್ ಎಲ್ಲಾ ಹಣವನ್ನು ಮರಳು ಮಾಲೀಕರಿಂದ ಕಲೆಕ್ಷನ್ ಮಾಡಿದ್ದಾರೆ. ಇದು ಸತ್ಯ. ನಾನು ಆಪಾದಿಸಿದಂತೆ ಮರಳು ಲಾರಿ ಮಾಲೀಕರಿಂದ ಶಾಸಕ ಹರತಾಳು ಹಾಲಪ್ಪ ಹಣ ಪಡೆದಿದ್ದಾರೆ ಎಂಬುದಾಗಿ ಮತ್ತೊಮ್ಮೆ ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here