ಶಾಸಕ ಹಾಲಪ್ಪ, ಸಹಚರರಿಂದ ಜಗದೀಶ ಗೌಡರ ಮೇಲೆ ಹಲ್ಲೆ ಪ್ರಕರಣ ; FIR ದಾಖಲಿಸಲು ಆಗ್ರಹ

0
522

ಶಿವಮೊಗ್ಗ: ಸಾಗರದ ಎಂ.ಡಿ.ಎಫ್. (ಎಲ್.ಬಿ. ಕಾಲೇಜ್) ಕಾರ್ಯದರ್ಶಿ ಜಗದೀಶ ಗೌಡರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದರೂ ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ತಕ್ಷಣವೇ ಎಫ್‌ಐಆರ್ ದಾಖಲಿಸದಿದ್ದರೆ ಸಾಗರದ ವೀರಶೈವ ಲಿಂಗಾಯತ ಸಮಾಜ ಹೋರಾಟ ತೀವ್ರಗೊಳಿಸುತ್ತದೆ ಎಂದು ಸಮಾಜದ ಪ್ರಮುಖರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಲ್ಲೆಗೆ ಒಳಗಾಗಿದ್ದ ಜಗದೀಶಗೌಡರು ಮಾತನಾಡಿ. ಮಾ. 17ರಂದು ಆಡಳಿತ ಮಂಡಳಿಯ ಸಭೆ ನಡೆಯುತ್ತಿತ್ತು.ಈ ಸಭೆಗೆ ಶಾಸಕ ಹರತಾಳು ಹಾಲಪ್ಪ ಬಂದಿದ್ದರು.ನಅವರು ಬರುವುದಕ್ಕೆ ಅಭ್ಯಂತರವಿರಲಿಲ್ಲ. ಆದರೆ, ರೆಸ್ಯೂಲೇಷನ್ ಬುಕ್ ಗೆ ಸಹಿ ಮಾಡುತ್ತೇನೆ ಎಂದಾಗ ನಾನು ಒಪ್ಪಲಿಲ್ಲ. ಸದಸ್ಯರಲ್ಲದವರು ಸಹಿ ಮಾಡುವಂತಿಲ್ಲ. ಬೈಲಾದಲ್ಲಿಯೇ ಈ ನಿಯಮವಿದೆ ಎಂದು ತಿಳಿಸಿದ್ದೆ. ಇದನ್ನು ಸಹಿಸದ ಶಾಸಕ ಹಾಲಪ್ಪ ಮತ್ತು ಆತನ ಸಹಚರರು ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ನಾನು ಆಸ್ಪತ್ರೆಗೆ ದಾಖಲಾದೆ ಎಂದು ತಿಳಿಸಿದರು.

ವೀರಶೈವ ಮುಖಂಡರಾದ ವಿರೂಪಾಕ್ಷ, ಬಿ.ಕೆ. ಮೋಹನ್ ಮುಂತಾದವರು ಮಾತನಾಡಿ, ಹಲ್ಲೆ ಮಾಡಿದ ಹಾಲಪ್ಪ ಮತ್ತು ಸಹಚರರವಿರುದ್ಧ ಅಂದೇ ದೂರು ನೀಡಲಾಗಿತ್ತು. ಆದರೆ, ಇದುವರೆಗೂ ಎಫ್‌ಐ ಆರ್ ದಾಖಲಿಸಿರುವುದಿಲ್ಲ. ಹಲ್ಲೆ ನಡೆದ ದಿನ ಪೊಲೀಸರು ಎದುರುಗಡೆಯೇ ಇದ್ದರೂ, ಶಾಸಕರಿದ್ದಾರೆ ಎಂಬ ಕಾರಣಕ್ಕೆ ಮೂಕ ಪ್ರೇಕ್ಷಕರಾ ಗಿದ್ದರು. ಘಟನೆಯನ್ನು ತಡೆಯಲಿಲ್ಲ. ಇದು ಪೊಲೀಸರ ವೈಫಲ್ಯವಾಗಿದೆ ಎಂದು ದೂರಿದರು.

ತಕ್ಷಣವೇ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳದಿದ್ದರೆ. ಇನ್ನು 2 -3 ದಿನಗಳಲ್ಲಿ ಪೊಲೀಸ್ ಠಾಣೆ ಮುಂದೆ ಹಾಗೂ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಮತ್ತು ಶಿವಮೊಗ್ಗ ಎಸ್.ಪಿ. ಕಚೇರಿ ಮುಂದೆ ಧರಣಿ ನಡೆಸಲಾಗುವುದು. ವೀರಶೈವ ಸಮಾಜ ಈ ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿ.ವೈ.ಎಸ್.ಪಿ. ಪಿ.ಒ. ಶಿವಕುಮಾರ್, ಅನಿಲ್ ಕುಮಾರ್, ಅಮೃತೇಶ್, ಚಂದ್ರಶೇಖರ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here