ಶಿಕಾರಿಗೆ ಹೋದಾಗ ಮಿಸ್ ಫೈರ್ ; ನೊಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಬಲಿ !?

0
3155

ತೀರ್ಥಹಳ್ಳಿ : ತಾಲೂಕಿನ ಅರಳಸುರುಳಿ ಸಮೀಪದ ನೊಣಬೂರು ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಂದೂಕಿನ ಗುಂಡು ತಗುಲಿ ಬಲಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ನೊಣಬೂರು ಮತ್ತು ಅರಳಸುರಳಿ ಗ್ರಾಮ ಪಂಚಾಯಿತಿ ನಡುವಿನ ಅರಣ್ಯ ಪ್ರದೇಶದಲ್ಲಿ ಒಟ್ಟು 12 ಮಂದಿ ಶಿಕಾರಿಗಾಗಿ ಕಾಡಿಗೆ ಬೇಟೆಯಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಬಂದೂಕಿನಿಂದ ಹಾರಿದ ಗುಂಡೊಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷನಿಗೆ ತಗುಲಿದೆ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕಾಂತರಾಜು (38) ಬಂದೂಕಿನ ಗುಂಡಿಗೆ ಬಲಿಯಾದ ವ್ಯಕ್ತಿ. ಬೇಟೆಯಾಡಲು ಹೋಗಿದ್ದ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಕಾಂತರಾಜು ಸಾವಿಗೆ ಕಾರಣ ಆಗಿರಬಹುದು ಎನ್ನಲಾಗುತ್ತಿದೆ. ಗುಂಡು ಹಾರಿಸಿದ 12 ಜನರು ಯಾರು? ಏನು? ಎಂಬುದು ಇನ್ನೂ ಹೊರಬಂದಿಲ್ಲ.

ಗೃಹ ಸಚಿವ ಆರಗ ಜ್ಞಾನೇಂದ್ರ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದ ಕಾರ್ಯಕ್ರಮದಲ್ಲಿದ್ದು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ತೆರಳಲ್ಲಿದ್ದಾರೆ.

ಸ್ಥಳದಲ್ಲಿ ಮಾಧ್ಯಮದವರಿಗೆ ನಿರ್ಬಂಧಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here