ಶಿಕಾರಿಪುರದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ | ದೇಶದ ಸಾರ್ವಭೌಮವನ್ನು ಎತ್ತಿ ಹಿಡಿಯುವ ಸದುದ್ದೇಶದಿಂದ ಸಂವಿಧಾನ ರಚನೆ ಮಾಡಲಾಯಿತು : ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ

0
132

ಶಿಕಾರಿಪುರ : ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಅವರಿಗೆ ಶೈಕ್ಷಣಿಕ ಆರ್ಥಿಕ ಸಾಮಾಜಿಕ ರಾಜಕೀಯವಾಗಿ ನ್ಯಾಯ ಒದಗಿಸುವ ಸದುದ್ದೇಶದಿಂದ ಮತ್ತು ಅವರ ಅಭಿವೃದ್ಧಿಗಾಗಿ ಸರ್ವರನ್ನೂ ಸಮಾನವಾಗಿ ಕಾಣುವ ನಿಟ್ಟಿನಲ್ಲಿ ಸಂವಿಧಾನ ರಚನೆಯಾಗಿದ್ದು, ಡಾ. ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಮೀತಿ ರಚನೆಯಾಗಿ ದೇಶದ ಸರ್ವ ಜನಾಂಗದವರು ನಾವೆಲ್ಲರೂ ಒಂದೇ, ದೇಶದ ಸಂವಿಧಾನದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕುವ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶಿಕಾರಿಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ಹಾಗೂ ವಿವಿಧ ಇಲಾಖೆಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದೊಂದಿಗೆ ನಡೆಸಲಾದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1947 ಆಗಸ್ಟ್ 15 ರಂದು ದೇಶದ ಸ್ವಾತಂತ್ರ್ಯವಾಯಿತು. ನಂತರ ಡಾ. ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ಆ ಸಮಿತಿ ವತಿಯಿಂದ ದೇಶದ ಸಾರ್ವಭೌಮವನ್ನು ಎತ್ತಿ ಹಿಡಿಯುವ ಸದುದ್ದೇಶದಿಂದ ಸಂವಿಧಾನ ರಚನೆ ಮಾಡಲಾಯಿತು. ಈ ಸಂವಿಧಾನವು ಜನವರಿ 26. 1950 ರಂದು ಜಾರಿಗೆ ತರಲಾಗಿದೆ. ಈ ಸಂವಿಧಾನದ ಜಾರಿಗೆಯಾದಾಗಿನಿಂದ ದೇಶದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆಯನ್ನು ನಡೆಸುತ್ತಾ ಬಂದಿರುವ ನಾವು ಇಂದು ದೇಶದ 73ನೇ ಗಣರಾಜ್ಯೋತ್ಸವವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.

ನಮ್ಮದೇ ಆದ ಸಂವಿಧಾನವನ್ನು ಹೊಂದಿ ಸರ್ವ ಸ್ವತಂತ್ರರಾದ ನಾವು ಗ್ರಾಮ ಪಂಚಾಯಿತಿಯ ಸದಸ್ಯರಿಂದ ಹಿಡಿದು ಲೋಕಸಭಾ ಸದಸ್ಯರನ್ನ ಮತ ನೀಡುವ ಮೂಲಕ ಆಯ್ಕೆ ಮಾಡುವ ಹಕ್ಕು ನಮ್ಮ ಸಂವಿಧಾನದಲ್ಲಿದೆ. ನಮ್ಮ ಭಾರತ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟವಾದ ಸಂವಿಧಾನ, ಗಣರಾಜ್ಯ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸಂವಿಧಾನವು ವಾಕ್ ಸ್ವಾತಂತ್ರ್ಯ, ಚಲನ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ. ಗಾಂಧೀಜಿ ಕಂಡುಕೊಂಡಂತಹ ಗ್ರಾಮರಾಜ್ಯದ ಕನಸನ್ನು ನನಸು ಮಾಡುವ ವ್ಯವಸ್ಥೆ ಸಂವಿಧಾನದಲ್ಲಿದೆ. ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ ನಮ್ಮ ಕರ್ತವ್ಯವನ್ನು ಸಹ ಸೂಚಿಸಿದೆ. ನಾವೆಲ್ಲರೂ ಸಮಾನತೆಯಿಂದ ಕೂತು ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನದ ಜಾರಿಗೆಯಾದಾಗಿನಿಂದ. ಈ ಸಂವಿಧಾನವು ಪ್ರಪಂಚದಲ್ಲಿಯೇ ಅತ್ಯಂತ ವೈಭವದ ವೈಶಿಷ್ಟ್ಯ ಹೊಂದಿದ್ದಾಗಿದೆ.

ವಿಶ್ವದೆಲ್ಲೆಡೆ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ಭಾರತದ ದೇಶದಲ್ಲಿ ಎದೆಗುಂದದೆ ಕೊರೊನ ವಿರುದ್ಧ ರಣಕಹಳೆ ಊದಲಾಯಿತು. ಈ ಸಮಯದಲ್ಲಿ ಕಠಿಣ ಪರಿಶ್ರಮ ಪಟ್ಟು ಕೊರೋನ ಮಹಾಮಾರಿಯನ್ನ ತಡೆಗಟ್ಟಲು ತಮ್ಮ ಪ್ರಾಣದ ಹಂಗು ತೊರೆದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳ ಪರಿಶ್ರಮ ಹೆಮ್ಮೆಯ ಪ್ರತೀಕವಾಗಿದೆ. ಕೊರೋನ ವಿಶ್ವದೆಲ್ಲೆಡೆ ಅತಿ ವೇಗವಾಗಿ ಹೋರಾಡುತ್ತಿರುವ ಸಮಯದಲ್ಲಿ ನಮ್ಮ ಭಾರತ ದೇಶದಲ್ಲಿ ಪ್ರಥಮ ಬಾರಿಗೆ ಲಸಿಕೆಯನ್ನು ಕಂಡುಕೊಳ್ಳಲಾಯಿತು. ಆ ಲಸಿಕೆಯನ್ನು ದೇಶದ ನೂರೈವತ್ತು ಕೋಟಿ ಜನರಿಗೆ ನೀಡುವುದರ ಮೂಲಕ ಕೊರೋನ ಕಾಯಿಲೆಯನ್ನು ತಡೆಗಟ್ಟುವ ವ್ಯವಸ್ಥೆ ಮಾಡಲಾಯಿತು. ನಮ್ಮ ದೇಶದಲ್ಲಿ ಉತ್ಪಾದನೆ ಮಾಡುವ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಲಾಯಿತು. ಅದೇರೀತಿ ನಮ್ಮ ದೇಶದ ರೈತರಿಗೆ ಅವಶ್ಯಕತೆ ಇರುವ ಆಹಾರ ಭದ್ರತೆಯನ್ನು ಒದಗಿಸಲಾಗಿದೆ. ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯುವ ನಿಟ್ಟಿನಲ್ಲಿ ಹಲವಾರು ಮೂಲಗಳಿಂದ ನೀರಿನ ಪೂರೈಕೆ ಮಾಡುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ, ಸಂದೇಶವನ್ನು ಸಾರಿದ ತಾಲ್ಲೂಕು ದಂಡಾಧಿಕಾರಿ ಎಂ ಪಿ ಕವಿರಾಜ್ ರವರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಾತಿ ಧರ್ಮ ಆರ್ಥಿಕ ಪರಿಸ್ಥಿತಿಗಳು ಬೇರೆ ಬೇರೆಯಾಗಿದ್ದರೂ ಶಿಕ್ಷಣ ಪಡೆಯುವ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿರುವುದು ಡಾ ಬಿ ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಮೀತಿಯ ಸಂವಿಧಾನದ ರಚನೆಯಿಂದ. ಇಂತಹ ಕರಡು ಮಸೂದೆಯನ್ನು ರಚಿಸಲು ಅಧ್ಯಕ್ಷತೆ ಹೊಂದಿದ ಡಾ ಬಿ ಆರ್ ಅಂಬೇಡ್ಕರ್ ರವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಕಾಲ ಸತತವಾಗಿ ಪರಿಶ್ರಮ ಪಟ್ಟು ಬೃಹತ್ತಾದ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ ಇಂತಹ ಮಹಾನೀಯರನ್ನ ಯಾರೂ ಕೂಡ ಮರೆಯಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಯ್ಯ, ಡಿವೈಎಸ್ಪಿ ಶಿವಕುಮಾರ್ ಮದರಖಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಪುರಸಭಾ ಮುಖ್ಯಾಧಿಕಾರಿ ಸುರೇಶ್ ಎ, ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳ ಮುಖ್ಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು.

ಪಥಸಂಚಲನದಲ್ಲಿ ಭಾಗವಹಿಸಿದ್ದ ಬೆರಳೆಣಿಕೆಯ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ, ಎರಡನೇ ಸ್ಥಾನ ಚೆನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ, ಮೂರನೇಯ ಸ್ಥಾನ ಸಿದ್ಧಲಿಂಗೇಶ್ವರ ಸ್ವಾಮಿ ಅನುದಾನಿತ ಪ್ರೌಢಶಾಲೆಗೆ ನೀಡಲಾಯಿತು. ಬ್ಯಾಂಡ್ ಸೆಟ್ ಗಳಲ್ಲಿ ಚೆನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರಿಂದ ಬ್ಯಾಂಡ್ ಸೆಟ್ಟಿಗೆ ಒಂದೇ ಒಂದು ಬಹುಮಾನವನ್ನು ನೀಡಲಾಯಿತು.

ಪದವಿ ಪೂರ್ವ ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆ:

ಈ ಸಮಾರಂಭದಲ್ಲಿ ಪಟ್ಟಣದ ವ್ಯಾಪ್ತಿಗೆ ಬರುವ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ, ಕೊಟ್ಟೂರೇಶ್ವರ ವಿದ್ಯಾಸಂಸ್ಥೆ, ಪುಷ್ಪಾ ವಿದ್ಯಾಸಂಸ್ಥೆ, ಕುಮುದ್ವತಿ ರೆಸಿಡೆನ್ಸಿಯಲ್ ಶಾಲೆ, ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಬಾಪೂಜಿ ವಿದ್ಯಾಸಂಸ್ಥೆ ಹೀಗೆ ಹಲವಾರು ವಿದ್ಯಾ ಸಂಸ್ಥೆಗಳಲ್ಲದೇ ವಿವಿಧ ಖಾಸಗಿ ವಿದ್ಯಾಸಂಸ್ಥೆಗಳ ಜೊತೆಗೆ ಅನೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಶಾಲೆಗಳ ವಿದ್ಯಾಸಂಸ್ಥೆಗಳ ಬ್ಯಾಂಡ್ ಸೆಟ್ ಗಳು ಕಳೆದೆರಡು ವರ್ಷಗಳ ಹಿಂದೆ ಭಾಗವಹಿಸುತ್ತಿದ್ದರು ಮತ್ತು 73 ನೇ ಗಣರಾಜ್ಯೋತ್ಸವ ಆಚರಣೆಗೆ ಭಾಗವಹಿಸಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಶಾಲಾ ಕಾಲೇಜುಗಳು ನಡೆಯದೇ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ನಡೆಸಲಾಗದೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿತ್ತು.

ಆದರೀಗ ಸರ್ಕಾರವೇ ಶಾಲಾ ಕಾಲೇಜುಗಳನ್ನು ನಡೆಸಲು ಅನುಮತಿ ನೀಡಿದೆಯಾದರೂ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಆಚರಣೆಗಾಗಲಿ ಹೀಗೆ ಹಲವು ಜಯಂತಿಗಳ ಆಚರಣೆಯ ಸಂದರ್ಭದಲ್ಲಾಗಲಿ, ಪಥಸಂಚಲನದಲ್ಲಾಗಲೀ ಬೆರಳೆಣಿಕೆಯಷ್ಟು ಮಾತ್ರ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಒಂದೇ ಒಂದು ಬ್ಯಾಂಡ್ ಸೆಟ್ ಗಳು ಶಾಲಾ ಕಾಲೇಜುಗಳ ಶಿಕ್ಷಕರು ಭಾಗವಹಿಸುತ್ತಿದ್ದಾರೆ ಇದು ಕೊರೋನ ಅಥವಾ ಒಮಿಕ್ರಾನ್ ಭೀತಿಯೋ ಅಥವಾ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಲು ನಿರಾಸಕ್ತಿಯೋ ತಿಳಿಯದಂತಾಗಿದೆ.

ಮುಂದಿನ ದಿನಗಳಲ್ಲಿ ಸರ್ಕಾರಗಳು ಕಠಿಣ ಕಾನೂನು ಕ್ರಮದ ಬಗ್ಗೆ ಸುತ್ತೋಲೆ ಹೊರಡಿಸಿ ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಸರ್ಕಾರದ ಕೊರೋನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಆಚರಣೆಯಲ್ಲಿ ಭಾಗವಹಿಸಲು ಸೂಚನೆ ನೀಡಬೇಕೆಂದು ಸಾರ್ವಜನಿಕರ ಸಲಹೆಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here