20.6 C
Shimoga
Friday, December 9, 2022

ಶಿಕಾರಿಪುರದ ಜಕಣಾಚಾರಿ ಬಿ.ಎಸ್ ಯಡಿಯೂರಪ್ಪ ; ಸಂಸದ ಬಿವೈಆರ್

ಶಿಕಾರಿಪುರ: ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಶಿಕಾರಿಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಒಂದು ರೀತಿಯಲ್ಲಿ ಜಕಣಚಾರಿಯವರು ಕಲ್ಲನ್ನು ಕೆತ್ತಿ ಕೆತ್ತಿ ಶಿಲೆಯನ್ನು ಮಾಡಿದಂತೆ ಬಿ. ಎಸ್ ಯಡಿಯೂರಪ್ಪರವರೂ ಕೂಡ ತಾಲ್ಲೂಕಿನ ಜನತೆಯ ಆಶಯದಂತೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಜಿಲ್ಲೆಯ ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು.

ಪಟ್ಟಣದ ದೊಡ್ಡಪೇಟೆಯಲ್ಲಿರುವ ಸೋಮವಂಶ ಆರ್ಯ ಕ್ಷತ್ರಿಯಾ (ಚಿತ್ರಗಾರ್) ಸಮಾಜದ ಸಮುದಾಯ ಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಶಿಕಾರಿಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಜೊತೆಗೆ ಬದುಕು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೊದಲ ರೈಲ್ವೆ ಯೋಜನೆಯಾದ ತಾಳಗೊಪ್ಪ- ಬೆಂಗಳೂರು ರೈಲು ಮಾರ್ಗ ಒಂದು ಬಿಟ್ಟರೆ, ಯಾವುದೇ ರೈಲು ಓಡಾಡಾಡುತ್ತಿರಲಿಲ್ಲ. ಆದರೀಗ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಸರ್ಕಾರವು ರಾಣೇಬೆನ್ನೂರಿನಿಂದ ಶಿವಮೊಗ್ಗದವರೆಗೆ ರೈಲು ಯೋಜನೆ ಜಾರಿಗೆ ತರಲಾಗಿದೆ. 

ಅಲ್ಲದೇ ಬಿ ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆ, ಆರೋಗ್ಯ ಕ್ಷೇತ್ರಕ್ಕಾಗಿ ಆಸ್ಪತ್ರೆಗಳು ನ್ಯಾಷನಲ್ ಹೈವೇ, ಪ್ರವಾಸಿ ತಾಣದ ಅಭಿವೃದ್ಧಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಯೋಜನೆಗಳನ್ನು ಜನತೆಗೆ ನೀಡಿದ್ದಾರೆ, ಒಬ್ಬ ವ್ಯಕ್ತಿಗೆ ಮೀನು ಕೊಡುವ ಬದಲು ಮೀನು ಹಿಡಿಯುವುದನ್ನು ಹೇಳಿಕೊಟ್ಟರೆ ಅವನ ಬದುಕು ಹಸನಾಗುತ್ತದೆ, ಈ ರೀತಿಯಲ್ಲಿ ಇಲ್ಲಿನ ಶಾಸಕರಾದ ಯಡಿಯೂರಪ್ಪನವರು ಶಿಕಾರಿಪುರದ ಜಕಣಾಚಾರಿ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಶಿಕಾರಿಪುರ ಅಧ್ಯಕ್ಷರಾದ ರೇಖಾಬಾಯಿ ಮಂಜುನಾಥ ಸಿಂಗ್, ಪುರಸಭೆ ಸದಸ್ಯರಾದ ಗುರುರಾಜ್ ಜಗತಾಪ್‌, ಪಾಲಾಕ್ಷಿ, ಬೆಣ್ಣೆ ದೇವೇಂದ್ರಪ್ಪ, ರೇಣುಕ ಸ್ವಾಮಿ, ಜಕಣಾಚಾರ್ಯ ಪ್ರಶಸ್ತಿ ವಿಜೇತರಾದ ಶಿಲ್ಪಿ ಕಾಶಿನಾಥ್, ಸಮಾಜ ಅಧ್ಯಕ್ಷರಾದ ಪರಶುರಾಮ ಪೌಣಾರ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!