ಶಿಕಾರಿಪುರ: ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು

0
438

ಶಿಕಾರಿಪುರ: ಇತ್ತೀಚೆಗೆ ನಡೆದ ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.

ತಾಲ್ಲೂಕಿನ ತರಲಘಟ್ಟ ಹಾಗೂ ಚುರ್ಚುಗುಂಡಿ ಗ್ರಾಮಗಳ ಚುನಾವಣೆ ಮಾ. 29 ರಂದು ನಡೆದಿತ್ತು. ಈ ಚುನಾವಣೆಯ ಫಲಿತಾಂಶವು ಮಾ. 31 ರಂದು ಹೊರಬಿದ್ದಿದ್ದು, ಇದರಲ್ಲಿ ಹೆಚ್ಚಿನ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ತರಲಘಟ್ಟ ಗ್ರಾಮ ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ, ತರಲಘಟ್ಟ ಕ್ಯಾಂಪ್ ನಲ್ಲಿ ತಿಮ್ಮಾಪುರ ಭದ್ರಾಪುರ ಹಾಗೂ ದೂಪದಹಳ್ಳಿಯ ನಾಲ್ಕು ಕ್ಷೇತ್ರಗಳಲ್ಲಿ ಜೋದಾಬಾಯಿ, ಶಶಿಕಲಾ, ಬಸವರಾಜ್, ಕುಮಾರ್ ನಾಯ್ಕ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತರಲಘಟ್ಟ ಕ್ಷೇತ್ರದಲ್ಲಿ ಮಂಜುನಾಯ್ಕ್ 386 ಮತ , ಶ್ವೇತ ಮಲ್ಲಿಕ್ ನಾಯ್ಕ್ 299 ಮತ, ಶೋಭಾ 277 ಮತಗಳನ್ನು ಪಡೆದು ಜಯಗಳಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದರೆ, ಎನ್ ಎನ್ ಸುಮ 241 ಮತಗಳಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ದೊಡ್ಡಜೋಗಿಹಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಿವಾನಂದಪ್ಪ 366 ಮತಗಳಿಸಿ ಜಯಗಳಿಸಿದ್ದರೆ, ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಯೋಗೀಶ್ 159, ಮಹೇಶಪ್ಪ 206 ಮತ ಗಳಿಸಿ ಜಯಗಳಿಸಿದ್ದಾರೆ.

ತರಲಘಟ್ಟ ಕ್ಯಾಂಪ್ ನ ಭದ್ರಾಪುರ-1 ರಲ್ಲಿ ದೂದ್ಯಾನಾಯ್ಕ್ 194 ಮತ ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದರೆ, ಭದ್ರಾಪುರ-2 ರಲ್ಲಿ ಮಂಜಮ್ಮ ಜ್ಞಾನೇಶ್, ಕ್ಯಾಂಪ್ ನಲ್ಲಿ ವಿಶ್ವ ಬಿ ಕೆ, ಚಂದ್ರಪ್ಪ ಬಾದಣ್ಣನವರ್, ಚಂದ್ರಪ್ಪ ಪೂಜಾರ್, ರೂಪ ಇವರುಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.

ಚುರ್ಚುಗುಂಡಿ ಗ್ರಾಮ ಪಂಚಾಯಿತಿಯಲ್ಲಿ ಚುರ್ಚುಗುಂಡಿ 2 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿ ರಮೇಶ್ ನಾಯ್ಕ್ 248 ಮತ, ಪುಷ್ಪಾವತಿ 175 ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿಂಗರಾಜು 248 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಚಿಕ್ಕಜೋಗೀಹಳ್ಳಿ ಕ್ಷೇತ್ರದಲ್ಲಿ ಮಂಜುಳ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹೇಮಾ ಕೊಟ್ರೇಶ್ 395 ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಿ ಎನ್ ಚಂದ್ರಪ್ಪ 473 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಚುರ್ಚುಗುಂಡಿ 1 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಕೆ 494 ಮತ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಲತಾ ಅಶೋಕ್ 236 ಮತ, ಲತಾ ರಾಘವೇಂದ್ರ 180 ಮತ ಪಡೆದು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here