ಶಿಕಾರಿಪುರ: ಪುರಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟ: ಯಾರಾದ್ರು ವಿಜಯಶಾಲಿಗಳು?

0
858

ಶಿಕಾರಿಪುರ: ಪಟ್ಟಣದ ಪುರಸಭೆಯ ಮೂರು ವಾರ್ಡ್ ಗಳಿಗೆ ಮಾ. 29 ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ತಾಲ್ಲೂಕು ಕಛೇರಿ ಸಮೀಪದ ಆಡಳಿತ ಸೌಧದಲ್ಲಿ ನಡೆಯಿತು. ಬಾರಿ ಕೂತುಹಲ ಮೂಡಿಸಿದ್ದ ಫಲಿತಾಂಶದಲ್ಲಿ ಒಂದು ವಾರ್ಡಿನಲ್ಲಿ ಪಕ್ಷೇತರ ಹಾಗೂ ಇನ್ನೆರಡು ವಾರ್ಡಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ದೊಡ್ಡಪೇಟೆಯ 5ನೇ ವಾರ್ಡಿನಲ್ಲಿ ನಡೆದ ಚುನಾವಣೆಯಲ್ಲಿ ಚಲಾಯಿಸಲಾದ ಒಟ್ಟು 631 ಮತಗಳಲ್ಲಿ, 416 ಮತಗಳನ್ನು ಪಕ್ಷೇತರ ಅಭ್ಯರ್ಥಿ ಶೈಲಾ ಯೋಗೀಶ್ ಮಡ್ಡಿಯವರು ಮತಗಳಿಸಿದ್ದು, ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಜ್ಯೋತಿ ಸಿದ್ಧಲಿಂಗಯ್ಯರವರು 212 ಮತಗಳನ್ನು ಪಡೆದಿರುತ್ತಾರೆ. ಈ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಶೈಲಾ ಯೋಗೀಶ್ ಮಡ್ಡಿಯವರು 204 ಅಂತರದಿಂದ ಜಯಗಳಿಸಿದ್ದಾರೆ. ಈ ವಾರ್ಡಿನಲ್ಲಿ 3 ನೋಟಾ ಮತಗಳು ಚಲಾವಣೆಯಾಗಿದೆ.

ವಾರ್ಡ್ 9 ರ ಜಯನಗರದಲ್ಲಿ ಒಟ್ಟು 1029 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಮೇಶ್ ಗುಂಡ 631 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ವೀಣಾ ವಿಜಯಕುಮಾರ್ ರವರು 392 ಮತಗಳನ್ನು ಪಡೆದಿರುತ್ತಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯು 239 ಮತಗಳ ಅಂತರಿಂದ ಜಯಗಳಿಸಿದ್ದಾರೆ. ಇಲ್ಲಿ 6 ನೋಟಾ ಮತಗಳು ಚಲಾವಣೆಯಾಗಿವೆ.

20ನೇ ವಾರ್ಡಿನ ಆಶ್ರಯ ಬಡಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 1228 ಮತಗಳು ಚಲಾವಣೆಯಾಗಿದ್ದು ಬಿಜೆಪಿ ಅಭ್ಯರ್ಥಿ ಉಮಾವತಿ 743 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮಿ ಸುರೇಶ್ ರವರು 473 ಮತಗಳನ್ನು ಪಡೆದಿರುತ್ತಾರೆ. ಬಿಜೆಪಿ ಅಭ್ಯರ್ಥಿ ಉಮಾವತಿ 270 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಈ ವಾರ್ಡಿನಲ್ಲಿ 12 ನೋಟಾ ಮತಗಳು ಚಲಾವಣೆಯಾಗಿವೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 8 ಸ್ಥಾನವನ್ನು ಬಿಜೆಪಿ ಪಡೆದಿತ್ತು ಕಾಂಗ್ರೆಸ್ 12 ಸ್ಥಾನ ಪಡೆದಿದ್ದರು. 3 ಪಕ್ಷೇತರರು ಆಯ್ಕೆಯಾಗಿದ್ದರು. ಮೂರು ಜನ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿ ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈಗ ಉಪ ಚುನಾವಣೆಯಲ್ಲಿ ಎರಡು ಸ್ಥಾನದಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, ಒಟ್ಟು 10 ಸ್ಥಾನಗಳ ಬಲ ಬಿಜೆಪಿ ಹೊಂದಿದ್ದು ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ 3 ಪಕ್ಷೇತರರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿರುವುದಕ್ಕೆ ಬಿಜೆಪಿಯು ಒಟ್ಟು 13 ಜನ ಸದಸ್ಯರ ಬಲ‌ ಹೊಂದಿದ್ದು ಪುರಸಭೆಯಲ್ಲಿ ಮತ್ತೆ ಅಧಿಕಾರ ನಡೆಸಲು ಸುಗಮವಾದ ಹಾದಿ ಹಿಡಿದಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here