ಶಿಕಾರಿಪುರ: ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಂತು ಹವಣಿಸುತ್ತಿರುವ ಜನ

0
404

ಶಿಕಾರಿಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಬನಸಿರಿ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಎರಡು ಪ್ರತ್ಯೇಕ ಲಸಿಕಾ ಕೇಂದ್ರ ಆಯೋಜಿಸಲಾಗಿದ್ದು, ಕೋವೀಡ್ ಕೇಂದ್ರದಲ್ಲಿ ಕೊರೊನಾ ಲಸಿಕೆಗಾಗಿ ಜನ ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯಲು ಹವಣಿಸುತ್ತಿದ್ದಾರೆ.

ತಾಲ್ಲೂಕು ಆರೋಗ್ಯ ಇಲಾಖೆಯು 18 ರಿಂದ 44 ವರ್ಷ ವಯಸ್ಸಿನವರಿಗೆ ಮೊದಲ ಹಾಗೂ ಎರಡನೇಯ ಕೊರೊನಾ ಲಸಿಕೆಯನ್ನು ಪಡೆಯು ಜನರಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಸದುದ್ದೇಶದಿಂದ ಆನ್‌ಲೈನ್ ತಂತ್ರಾಂಶದ ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಹಿರಿಯರು ಮತ್ತು ಕಿರಿಯರು ವಯೋವೃದ್ಧರು ಪ್ರತಿದಿನ ಬೆಳಗ್ಗೆ ಎಂಟರಿಂದ ಸರದ್ದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಲಸಿಕೆ ನೀಡುವ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಒಂಭತ್ತರ ನಂತರ ಆಗಮಿಸುತ್ತಿದ್ದಾರೆ ಎಂದು ಲಸಿಕೆ ಪಡೆಯುವವರ ಅಳಲು.

ಆನ್‌ಲೈನ್ ಮೂಲಕ ನೋಂದಣಿ ಮಾಡಿದವರ ಪೈಕಿ ಮೊದಲನೇ ಬಾರಿಗೆ ಪಡೆಯುವವರಿಗೆ ಪ್ರತಿದಿನ 150 ಕ್ಕಿಂತ ಹೆಚ್ಚಿನ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಎರಡನೇ ಬಾರಿಗೆ ಪಡೆಯುವವರಿಗೆ ಸಂಜೆಯವರೆಗೆ ಎಷ್ಟು ಸಾಧ್ಯವೋ ಅಷ್ಟು ನೀಡಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here