ಶಿಕಾರಿಪುರ: ಸಂಪ್ರದಾಯಿಕ ರಂಗಿನಹಬ್ಬ ‘ಹೋಳಿ’ ಆಚರಣೆ

0
286

ಶಿಕಾರಿಪುರ : ಕೊರೊನಾ ಎರಡನೇ ಅಲೆ ಹಾಗೂ ನಾಳೆ ಪುರಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಆದೇಶದ ಮೇರೆಗೆ ಹೋಳಿ ಹಬ್ಬ ಆಚರಿಸದೇ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು. ಆದರೂ ಪ್ರತಿ ವರ್ಷದ ಪದ್ಧತಿಯಂತೆ ಪಟ್ಟಣದಲ್ಲಿ ವಿವಿಧ ಬೀದಿಗಳಲ್ಲಿ ರಂಗಿನಹಬ್ಬ ಆಚರಿಸಲಾಯಿತು.

ಭಾನುವಾರದ ಶಾಲಾ ಕಾಲೇಜುಗಳ ಸರ್ಕಾರಿ ನೌಕರರ ರಜಾ ದಿನವಾದ ಇಂದು, ಪೊಲೀಸ್ ಇಲಾಖೆಯ ಬಂದೋಬಸ್ತಿನಿಂದ ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ, ಚಿಕ್ಕ ಚಿಕ್ಕ ಮಕ್ಕಳು, ಯುವಕ ಯುವತಿಯರು, ಪುರುಷರು ಮಹಿಳೆಯರು, ರಾಜಸ್ಥಾನ ಮೂಲದ ಮಾರ್ವಾಡಿಗರು, ವಯೋವೃದ್ಧರು ಮುಖ್ಯ ರಸ್ತೆಗಳಿಗೆ ಇಳಿಯದೇ, ಅಲ್ಲಲ್ಲಿ ರತಿ, ಮನ್ಮಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡುವುದರ ಮೂಲಕ ವಿವಿಧ ರೀತಿಯ ಬಣ್ಣಗಳನ್ನು ಬಳಸಿ ಮುಖಕ್ಕೆ ಹಚ್ಚಿ ಸಾಂಪ್ರದಾಯಿಕವಾಗಿ ಹೋಳಿ ಹಬ್ಬ ನಡೆಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here