ಶಿಕ್ಷಕರ, ಗ್ರಾಮಸ್ಥರ ಸಹಮತ ಒಮ್ಮತಕ್ಕೆ ಸಾಕ್ಷಿಯಾದ ಬಿದರಹಳ್ಳಿ, ಆನೆಗದ್ದೆ ಶಾಲೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಸಚಿವರ ಪ್ರಶಂಸೆ

0
842

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಚಿಣ್ಣರ ಶಾಲಾ ಪ್ರವಾಸದಲ್ಲಿ ಹೊಸನಗರ ತಾಲ್ಲೂಕಿನ ಬಿದರಹಳ್ಳಿ, ಆನೆಗದ್ದೆ ಸರ್ಕಾರಿ ಶಾಲೆಗಳ ಮಾದರಿಯನ್ನಾಗಿಟ್ಟುಕೊಂಡು ವೀಕ್ಷಣೆ ಮಾಡಿಸುವ ಚಿಂತನೆ ನನ್ನದಾಗಿದೆ ಎಂದು ರಾಜ್ಯ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಹುಂಚಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಿದರಹಳ್ಳಿ, ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಆನಿರೀಕ್ಷಿತ ಭೇಟಿ ನೀಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ಶಾಲೆಗಳಲ್ಲಿ ಜ್ಞಾನ ಭಂಡಾರವೆ ತುಂಬಿಕೊಂಡಿದ್ದು ಶಾಲೆಗೆ ಬರುವ ಮಕ್ಕಳಲ್ಲಿ ಪರಿಸರ ಮತ್ತು ವಿವಿಧ ಜ್ಞಾನಪೀಠ ಪಡೆದ ಸಾಹಿತಿಗಳ ಹಾಗೂ ರಾಷ್ಟ್ರಪತಿ ಪ್ರಧಾನಮಂತ್ರಿ ಹೀಗೆ ಆಧುನಿಕ ಯುಗದಲ್ಲಿ ಹೊಸಹೊಸ ಅವಿಷ್ಕಾರಗಳ ಕುರಿತು ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಬೆಳಸುವಂತಹ ಶಿಕ್ಷಕರ ಅವಿರತ ಪರಿಶ್ರಮ ಕಂಡು ದಿಗ್ಬ್ರಮೆಗೊಂಡು ಇಂತಹ ಶಾಲೆಗಳನ್ನು ಮಾದರಿಯಾಗಿಟ್ಟುಕೊಂಡು ಯೂಟೂಬ್ ಫೇಸ್‌ಬುಕ್ ವಾಟ್ಸಾಪ್ ಹಾಗೂ ವೆಬ್‌ಸೈಟ್ ಮೂಲಕ ಅಪ್‌ಲೋಡ್ ಮಾಡುವಂತೆ ಸ್ಥಳದಲ್ಲಿದ್ದ ಜಿಲ್ಲಾಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಶಾಲಾ ಶಿಕ್ಷಕರನ್ನು ಮತ್ತು ಗ್ರಾಮಸ್ಥರನ್ನು ಪ್ರಶಂಸಿದ್ದರು.

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಪ್ರಕೃತಿಯ ಮಡಿಲಿನಲ್ಲಿರು ಬಿದರಹಳ್ಳಿ, ಆನೆಗದ್ದೆ ಇನ್ನಿತರ ಶಾಲೆಗಳ ಪ್ರವಾಸ ಮಾಡಿಸಿ ಶಾಲೆಯ ಅಭಿವೃದ್ಧಿಗೆ ಪ್ರೇರಣೆಯಾಗುತ್ತದೆಂಬ ಕಲ್ಪನೆ ನನ್ನದಾಗಿದೆ. ಬಿದರಹಳ್ಳಿ ಶಾಲೆಯ ಅಭಿವೃದ್ದಿ ಗ್ರಾಮಸ್ಥರ ಹಾಗೂ ಶಿಕ್ಷಕರ ವೃಂದದ ಅವಿರತ ಶ್ರಮ ಪ್ರಾಮಾಣಿಕ ಸೇವೆ ಒಮ್ಮತದ ಕಾಳಜಿಯಿಂದಾಗಿ ಗ್ರಾಮೀಣ ಪ್ರದೇಶದ ಈ ಶಾಲೆ ರಾಜ್ಯದಲ್ಲಿ ಅತ್ತುತ್ತಮ ಮಾದರಿ ಶಾಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಈ ಶಾಲೆಯ ಅಭಿವೃದ್ದಿ ಕುರಿತು ಗ್ರಾಮಸ್ಥರಲ್ಲಿ ಕೇಳಿದರೆ ಶಿಕ್ಷಕರು ಎನ್ನುತ್ತಾರೆ. ಶಿಕ್ಷಕರಲ್ಲಿ ಕೇಳಿದರೆ ಗ್ರಾಮಸ್ಥರು ಮಕ್ಕಳ ಪೋಷಕವರ್ಗ ಎನ್ನುತ್ತಾರೆ. ಶಿಕ್ಷಕರ ಮತ್ತು ಗ್ರಾಮಸ್ಥರ ಶಾಲೆಯ ಅಭಿವೃದ್ದಿ ಬಗ್ಗೆ ಸಹಮತ-ಒಮ್ಮತದ ಅಭಿಪ್ರಾಯವಿದ್ದರೆ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಬಿದರಹಳ್ಳಿ ಶಾಲೆಯೆ ಸಾಕ್ಷಿಯಾಗಿದೆ ಎಂದರು.

ಮಕ್ಕಳ ಜೊತೆ ಕುಳಿತ ಸಮಾಲೋಚಿಸಿದ ಸಚಿವರು:

ಶಾಲೆಯ ಸಮಯ ಮುಗಿದು ಒಂದು ಗಂಟೆ ತಡವಾಗಿ ಶಾಲೆಗೆ ಭೇಟಿ ನೀಡಿದ ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಯವರು ಸಚಿವರ ಸ್ವಾಗತಕ್ಕಾಗಿ ಬೆಳಗ್ಗೆಯಿಂದ ಸಂಜೆಯ ತನಕ ಕಾದುಕುಳಿತ ಮಕ್ಕಳನ್ನು ಕಂಡು ಮಕ್ಕಳಲ್ಲಿ ಕ್ಷಮೆಯಾಚಿಸಿ ಸರ್ಕಾರದ ಬಿಸಿಯೂಟ ಇನ್ನಿತರ ಮೂಲಭೂತ ಸೌಲಭ್ಯಗಳು ಪಠ್ಯಪುಸ್ತಕ ಸಮವಸ್ತ್ರದಂತಹ ಸೌಲಭ್ಯಗಳ ಪಾಠ ಪ್ರವಚನಗಳ ಬಗ್ಗೆ ವಿದ್ಯಾರ್ಥಿಗಳ ಮಧ್ಯ ಕುಳಿತು ಸಮಾಲೋಚಿಸಿದರು.

ಇದೇ ಸಂದರ್ಭದಲ್ಲಿ ಎಸ್.ಡಿಎಂಸಿ ಮತ್ತು ಗ್ರಾಮಸ್ಥರು ಶಿಕ್ಷಕ ಸಮೂಹ ಸಚಿವರನ್ನು ಶಾಲು ಹೂಂದಿಸಿ ಸನ್ಮಾನಿಸಿ ಗೌರವಿಸಿದರು.

ಬಿಡುವಿಲ್ಲದ ಒತ್ತಡದಲ್ಲಿಯೂ ಬಿದರಹಳ್ಳಿ ಶಾಲೆಗೆ ಭೇಟಿ ನೀಡಿದ ಸಚಿವ ಬಿ.ಸಿ.ನಾಗೇಶ್ ರವರು ತೆಂಗಿನ ಸಸಿ ನೆಟ್ಟು ನೀರು ಹಾಕಿ ನಂತರ ಶಾಲಾ ಆವರಣದೊಳಗೆ ಪ್ರವೇಶಿಸಿ ಮಕ್ಕಳ ತೂಗು ಸೇತುವೆ ಶಾಲಾ ಅವರಣದಲ್ಲಿ ರಾಷ್ಟ್ರ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಪರಿಸರ ರಕ್ಷಣೆಯ ಮರಗಿಡಗಳ ಪರೀಶೀಲನೆ ನಡೆಸಿ ಕೊಠಡಿಯಲ್ಲಿನ ಗಣಕ ಯಂತ್ರಗಳ ವನಸ್ಪತಿ ಗಿಡಮೂಲಿಕೆ ಸಸ್ಯಗಳ ವೀಕ್ಷಣೆ ನಡೆಸಿ ಗ್ರಾಮಸ್ಥರನ್ನು ಶಿಕ್ಷಕವರ್ಗವನ್ನು ಅಭಿನಂದಿಸಿದರು.

ಜಿಲ್ಲಾ ಪರಿಷತ್ ವಿರೋಧ ಪಕ್ಷದ ಮಾಜಿ ಸದಸ್ಯ ಬಿ.ಎಸ್.ಪುರುಷೋತ್ತಮ್‌ರಾವ್, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಅಮೃತ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷ ಲಿಂಗರಾಜ್‌ಬಂಡಿ, ಬಿಜೆಪಿ ಮುಖಂಡರಾದ ಆರ್.ಟಿ.ಗೋಪಾಲ್, ಎನ್.ಸತೀಶ್, ನಾಗಾರ್ಜುನಸ್ವಾಮಿ ಆವಳ್ಳಿ, ಜಂಬಳ್ಳಿ ಗಿರೀಶ್, ಡಿಡಿಪಿಐ ರಮೇಶ್, ಬಿಇಓ ವೀರಭದ್ರಪ್ಪ, ಪಿಡಿಓ ಸುಧಾ, ಗ್ರಾಮಲೆಕ್ಕಾಧಿಕಾರಿ ಧನ್ಯ ಕವಿರಾಜ್, ಅರವಿಂದ ಕಾರೆಮಟ್ಟಿ, ಕಲ್ಲೂರು ನಾಗೇಂದ್ರ, ಬೇಗುವಳ್ಳಿ ಸತೀಶ್, ಎಸ್.ಡಿಎಂ.ಸಿ.ಅಧ್ಯಕ್ಷ ಶಿವಕುಮಾರ್, ಬಂಡಿ ದಿನೇಶ್, ಶಿಕ್ಷಕರಾದ ದಿನೇಶ್,ದೇವೇಂದ್ರಪ್ಪ, ಸೌಮ್ಯ, ಆಯಿಷಾ, ರವೀಂದ್ರ,ಮಧುಕರ್, ಗ್ರಾ.ಪಂ.ಸದಸ್ಯ ಸಚಿನ್‌ಗೌಡ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here