ಶಿಕ್ಷಕ ಗಜಾನನ ರವರಿಗೆ ಸ್ನೇಹಕೂಟದಿಂದ ಆತ್ಮೀಯ ಬೀಳ್ಕೊಡುಗೆ

0
529

ಹೊಸನಗರ: ರಾಜ್ಯ ಮಟ್ಟದಲ್ಲಿ ಹೊಸನಗರದ ನೀರೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯನ್ನು ಆದರ್ಶ ಶಾಲೆಯನ್ನಾಗಿಸಿ ಇತ್ತೀಚಿಗೆ ಸಿ.ಆರ್.ಪಿಯಾಗಿ ಸಾಗರದ ಸೈದೂರಿಗೆ ವರ್ಗಾವಣೆಯಾಗಿರುವ ಶಿಕ್ಷಕ ಗಜಾನನ ಎಂ.ಎನ್ ಯವರಿಗೆ ಹೊಸನಗರದ ಸ್ನೇಹಕೂಟದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಬಸವಣ್ಣಪ್ಪರವರು ಮಾತನಾಡಿ, ತಮ್ಮ ಕಾರ್ಯಕ್ಷಮತೆಯಿಂದ ತಾಲೂಕಿಗೆ ಕೀರ್ತಿತಂದ ಗಜಾನನರವರು ಇತರರಿಗೆ ಮಾರ್ಗದರ್ಶಿಯಾಗಿದ್ದಾರೆಂದರು.

ಕಸಾಪ ಮಾಜಿ ಅಧ್ಯಕ್ಷರಾದ ಕೆ.ಇಲಿಯಾಸ್ ಗಜಾನನರವರ ಕಾರ್ಯಕ್ಷಮತೆಯನ್ನು ಕೊಂಡಾಡಿದರು.

ಕೃಷಿ ಅಧಿಕಾರಿ ಸುಬ್ರಹ್ಮಣ್ಯರವರು ಇಲಾಖೆಯ ವತಿಯಿಂದ ಕೃಷಿ ಅಭಿಯಾನದಲ್ಲಿ ಸನ್ಮಾನಿಸಿದ್ದನ್ನು ನೆನಪಿಸಿದರು.

ಪ.ಪಂ.ಸದಸ್ಯರಾದ ಯಾಸಿರ್ ತಮ್ಮ ಸುದೀರ್ಘ 15 ವರ್ಷಗಳ ಒಡನಾಟವನ್ನು ನೆನಪಿಸಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಗುರುಕಿರಣ್, ತಾಲ್ಲೂಕು ಕೆಡಿಪಿ ಸದಸ್ಯರಾದ ಶಾಬುದ್ದೀನ್, ಶಿಕ್ಷಕರಾದ ಮಂಜುನಾಥ್, ಸುಬ್ರಹ್ಮಣ್ಯ, ಕಿರಣ್ ಜೆರಾಕ್ಸ್ ಮಾಲಿಕರಾದ ವಿಲ್ಸನ್ ಬಾಂಜ್-ವಿಲ್ಮಾ ಬಾಂಜ್, ವರ್ತಕರಾದ ಶಮೀರ್, ಆಂತೋಣಿ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here