ಹೊಸನಗರ: ಶಿಕ್ಷಕ ವೃತ್ತಿ ಪುಣ್ಯದ ಕೆಲಸ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರುವುದರಿಂದಲೇ ಈ ಜನ್ಮದಲ್ಲಿ ನಮಗೆ ಶಿಕ್ಷಕ ವೃತ್ತಿ ಲಭಿಸಿದೆ ಎಂದು ಹೊಸನಗರ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಕುಬೇರಪ್ಪನವರು ಹೇಳಿದರು.
ಮಾವಿನಕೊಪ್ಪ ಸರ್ಕಾರಿ ಶಾಲೆಯ ಆವರಣದಲ್ಲಿ ಬಡ್ತಿ ಹೊಂದಿದ ರಾಜು ಶಿಕ್ಷಕರಿಗೆ ಸನ್ಮಾನ ಬೀಳ್ಕೊಡುಗೆ ಹಾಗೂ ಶಾರದ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕ ವೃತ್ತಿಯಲ್ಲಿ ಲಂಚ ಪಡೆದ ಅಪವಾದ ಬರುವುದಿಲ್ಲ ನೂರಾರು ಮಕ್ಕಳಿಗೆ ವಿದ್ಯೆ ಕಲಿಸಿದ ಪುಣ್ಯ ಎಂದಿಗೂ ನಮ್ಮ ಹೆಗಲ ಮೇಲಿರುತ್ತದೆ. ಆದರೆ ಶಿಕ್ಷಕರಾದವರು ಶಿಸ್ತು ಸಂಯಮವನ್ನು ಮೂಲ ಮಂತ್ರವಾಗಿ ವಿದ್ಯಾರ್ಥಿಗಳಿಗೆ ಕಲಿಸುವುದು ನಮ್ಮ ವೃತ್ತಿಯಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ 1 ವರ್ಷಗಳಿಂದ ಈ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸಿದ್ದ ರಾಘವೇಂದ್ರರವರಿಗೆ ಅಕ್ಷರ ದಾಸೋಹದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಡಿಗೆಯವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಆರ್, ಎಸ್ಡಿಎಂಸಿ ಉಪಾಧ್ಯಕ್ಷೆ ಸವಿತಾ ಎಸ್ಡಿಎಂಸಿ ಎಲ್ಲಾ ಸದಸ್ಯರು, ಶಿಕ್ಷಕರಾದ ರಾಧ, ವೇದಾಬಾಯಿ, ಕೆಂಚಪ್ಪ, ಕುಮಾರಿ ಆಶಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Related