ಶಿಕ್ಷಣವೆಂದರೆ ಬರಿ ಅಕ್ಷರ ಕಲಿಯುವುದಲ್ಲ, ಆತ್ಮಸಂಸ್ಕಾರ ಒದಗಿಸುವಂತಿರಬೇಕು: ಕಿಶೋರ್ ನಾರಾಯಣ್

0
459

ರಿಪ್ಪನ್‌ಪೇಟೆ: ಶಿಕ್ಷಣವೆಂದರೆ ಬರಿ ಅಕ್ಷರ ಕಲಿಯುವುದಲ್ಲ. ಆತ್ಮಸಂಸ್ಕಾರ ಒದಗಿಸುವಂತಿರಬೇಕು ಎಂದು ವಸುದೈವ ಕುಟುಂಬ ಟ್ರಸ್ಟಿನ ಮುಖ್ಯಸ್ಥರಾದ ಕಿಶೋರ್ ನಾರಾಯಣ್ ರವರು ಹೇಳಿದರು.

ಅವರು ಶನಿವಾರ ಹುಂಚ ಗ್ರಾ.ಪಂ ವ್ಯಾಪ್ತಿಯ ಸ.ಹಿ.ಪ್ರಾ.ಪಾಠ ಶಾಲೆ ಸಮಟಗಾರು ಇಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟಿನ ಮೂಲಕ ಸಂತಸದಾಯಕ, ಸೃಜನಶೀಲ ವಿಶೇಷ ಬಗೆಯ ಕಲಿಕಾ ಸಾಮಾಗ್ರಿಗಳು, ಬ್ಯಾಗ್ ಹಾಗೂ ಕೊರೊನಾ ಕಿಟ್ ವಿತರಿಸಿ ಮಾತನಾಡಿ, ಇಡೀ ಶಾಲೆ ಕಾಲಿಕಾ ಸ್ನೇಹಿ ವಾತಾವರಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳು ಸ್ಫುಟವಾಗಿ ಉಚ್ಚರಿಸುತ್ತಿದ್ದು ಶ್ರೀರಾಮರಕ್ಷಾಸ್ತೋತ್ರ, ಶ್ಲೋಕಗಳು, ಅವರ ಸ್ವತಂತ್ರ ಅಭಿವ್ಯಕ್ತಿ ಕೌಶಲ, ಹಾಗೆಯೇ ಪಠ್ಯದ ವಿಷಯಗಳನ್ನು ಶಾಲಾವಲಯದಲ್ಲಿ ಅಳವಡಿಸಿ ಆಟದ ಮೂಲಕ ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆ ಒದಗಿಸುತ್ತಿರುವ ಶಿಕ್ಷಕರ ಸೃಜನಶೀಲತೆಯನ್ನು ಶ್ಲಾಘಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಹೊಸಮನಿ ಕ್ಲಿನಿಕ್ ನ ವೈದ್ಯರಾದ ಡಾ|| ಮುರಳಿ ಮಾತನಾಡಿ, ಅನುಪಯುಕ್ತ ವಸ್ತುಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಆಕರ್ಷಕ ಕಲಿಕಾ ಸ್ನೇಹಿ ವಾತಾವರಣ ರೂಪಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಹುಂಚ ಗ್ರಾಪಂ ಅಧ್ಯಕ್ಷರಾದ ಪಲ್ಲವಿ ವಿದ್ಯಾರ್ಥಿಗಳ ಸಂಸ್ಕಾರ, ಶಾಲಾ ವಾತಾವರಣ ಕುರಿತು ಮೆಚ್ಚುಗೆ ಸೂಚಿಸಿದರು.

ನಿವೃತ್ತ ಉಪನ್ಯಾಸಕರಾದ ಶ್ರೀಧರಮೂರ್ತಿ ಮಾತನಾಡಿ, ಅಂಧರಿಗೆ ಸಮಾಜದ ದುರ್ಬಲ ವರ್ಗದವರಿಗೆ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವ ವಸುದೈವ ಕುಟುಂಬಕಂ ಟ್ರಸ್ಟಿನ ಸಮಾಜದ ಕಳಕಳಿ ಸರ್ವರಿಗೂ ಮಾದರಿ. ಹಾಗೆಯೇ ಮುಖ್ಯ ಶಿಕ್ಷಕರಾದ ರತ್ನಕುಮಾರಿ, ಸಹ ಶಿಕ್ಷಕರಾದ ಅಂಬಿಕಾ ಹಾಗೂ ಪ್ರಿಯಾಂಕ ಇವರ ವೃತ್ತಿಬದ್ಧತೆ ಕ್ರಿಯಾಶೀಲತೆ ಶಾಲೆಯ ಯಶಸ್ಸಿಗೆ ಕಾರಣ ಎಂದರು.

ಈ ಸಂದರ್ಭದಲ್ಲಿ ಹುಂಚ ಗ್ರಾಪಂ ಉಪಾಧ್ಯಕ್ಷರಾದ ದೇವೇಂದ್ರ, ಸದಸ್ಯರಾದ ವೆಂಕಟೇಶ್, ಸ್ಥಳೀಯರಾದ ಅನಂತ, ವಿಶ್ವನಾಥ ಉಪಸ್ಥಿತರಿದ್ದರು.

ಶಿಕ್ಷಕರಾದ ಅಂಬಿಕಾ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು. ವಿದ್ಯಾರ್ಥಿಗಳಾದ ಶಿಶಿರಾ ಮತ್ತು ಅಂಕಿತಾ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here