ಶಿಥಿಲಗೊಂಡ ಹೊಸನಗರ ಬಿಎಸ್‌ಎನ್‌ಎಲ್ ಕಟ್ಟಡ ! ಸಿಬ್ಬಂದಿಗಳ ಪಾಡು ಕೇಳುವವರ್ಯಾರು?

0
655

ಹೊಸನಗರ: ಪಟ್ಟಣದ ಅಂಚೆ ಕಛೇರಿಯ ಪಕ್ಕದಲ್ಲಿರುವ ಬಿಎಸ್‌ಎನ್‌ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಿನ ಸಿಬ್ಬಂದಿಗಳು ಜೀವ ಭಯದಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಜೀವಭಯವಿದ್ದು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಭಾರಿ ದೊಡ್ಡ ಅನಾಹುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸನಗರದ ಬಿಎಸ್‌ಎನ್‌ಎಲ್ ಕಛೇರಿಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಕಟ್ಟಡದ ನಿರ್ವಹಣೆಯಿಲ್ಲದೇ ಇಡೀ ಕಟ್ಟಡವೇ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದರೂ ಬಾಗಿಲುಗಳು ಕಿಟಕಿಗಳು ಮುರಿದುಕೊಂಡು ಜೋತಾಡುತ್ತಿದ್ದರೂ ಮೇಲಾಧಿಕಾರಿಗಳು ಗಮನ ಹರಿಸದೇ ಇರುವುದೇ ವಿಪರ್ಯಸವಾಗಿದೆ.

ಹೊಸನಗರ ತಾಲ್ಲೂಕು ಮಲೆನಾಡು ಪ್ರದೇಶವಾಗಿದ್ದು ಅದರಲ್ಲಿಯೂ ಈ ವರ್ಷ ಪೂರ್ಣ ಮಳೆ ಬಂದಿದೆ ಮೇಲ್ಚಾವಣೆ ಕುಸಿತದಿಂದ ಕಛೇರಿಯ ಒಳ ಭಾಗದಲ್ಲಿ ನೀರು ನಿಲ್ಲುತ್ತಿದೆ ಆ ಸೋರಿಕೆಯ ಕೊಠಡಿಯಲ್ಲಯೇ ಸಂಬಂಧಪಟ್ಟ ಮಷಿನ್‌ಗಳನ್ನು ಇಡಲಾಗಿದೆ ಕಛೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಡಲಾಗಿದೆ. ಗೋಡೆಯ ಮೇಲ್ಬಾಗದ ಛಾವಣಿಯು ಹಾಳಾಗಿದೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಲ್ಲ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆಗಳಿವೆ.

ಕಟ್ಟಡದ ಒಳ ಬಾಗದಲ್ಲಿ ಮರಗಳ ಬೇರುಗಳು ಗೋಡೆಯ ಒಳಗೆ ಹೊಕ್ಕಿದ್ದು ಗೋಡೆಗಳು ಬಿರುಕು ಬಿಟ್ಟಿದೆ ಕಟ್ಟಡಕ್ಕೆ ಬಣ್ಣ ಬಳಿಯಾದೇ ಬಹಳಷ್ಟು ವರ್ಷಗಳಾಗಿದೆ ಕಟ್ಟಡದ ಸುತ್ತ-ಮುತ್ತ ಎತ್ತರದ ಗಿಡಗಳು ಬೆಳೆದು ನಿಂತಿದೆ ನಿತ್ಯ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

ಕಟ್ಟಡ ನಿರ್ವಹಣೆ ಅನಿವಾರ್ಯ ಎಂದು ಅನೇಕ ಬಾರಿ ಇಲ್ಲಿನ ಅಧಿಕಾರಿಗಳು ಕಾಗದ ಪತ್ರಗಳನ್ನು ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ ಮೇಲಾಧಿಕಾರಿಗಳು ಗಮನ ಹರಿಸದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಕಛೇರಿಯ ಸಿಬ್ಬಂದಿಗಳ ಕೊರಗಾಗಿದೆ.

ಅಕ್ರಮ ಚಟುವಟಿಕೆಗಳ ತಾಣ:

ದೂರವಾಣಿ ಕೇಂದ್ರದ ಸುತ್ತ ಕಾಂಪೌಂಡ್ ವ್ಯವಸ್ಥೆಯಿಲ್ಲ. ಕಾಂಪೌಂಡ್ ಇದ್ದರೂ ಮಳೆಯ ರಭಸಕ್ಕೆ ಉರುಳಿ ಬಿದ್ದಿದೆ. ಮರಗಿಡ ಪೋದೆಗಳು ಬೆಳೆದು ಈ ಜಾಗ ಕುಡುಕರ ಜೂಜುಕೋರರ ತಾಣವಾಗಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಕಟ್ಟಡ ಸುತ್ತ-ಮುತ್ತಲು ರಾಶಿ-ರಾಶಿ ಮದ್ಯದ ಬಾಟಲ್‌ಗಳು ಕಾಣಸಿಗುತ್ತದೆ.

ಕಟ್ಟಡದ ಸ್ಥಿತಿಯ ಕುರಿತು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಕೂಡಲೇ ಸರಿಪಡಿಸಬೇಕೆಂದು ನಿತ್ಯವೂ ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಜೀವ ಉಳಿಸಬೇಕಾಗಿದೆ.

ಹೊಸನಗರ ತಾಲ್ಲೂಕಿನ ಜನತೆ ನೆಟ್‌ವರ್ಕ್ ಸಮಸ್ಯೆಯಿಂದ ಬಿಎಸ್‌ಎನ್‌ಎಲ್ ಕಛೇರಿಗೆ ಜನರು ಹಿಡಿ ಶಾಪ ಹಾಕುವುದರ ಜೊತೆಗೆ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಆನಾಹುತವಾದರೆ ಇಡೀ ತಾಲ್ಲೂಕಿನ ಜನರು ಎದ್ದು ನಿಂತು ಪ್ರತಿಭಟಿಸುವುದರಲ್ಲಿ ಅನುಮಾನವಿಲ್ಲ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಸ್ವಂದಿಸಿ ಕಛೇರಿಯ ದುರಸ್ತಿ ಕಾರ್ಯಕ್ಕೆ ಮುಂದಾಗಲೀ ಎಂಬುದು ಹೊಸನಗರ ಸಾರ್ವಜನಿಕರ ಆಶಯವಾಗಿದೆ

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here