ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳು ತೃಪ್ತಿ ತಂದಿದೆ: ಕೆ.ಎಂ. ಶಾಂತರಾಜು

0
323

ಶಿವಮೊಗ್ಗ : ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾನು ಕೈಗೊಂಡ ಕೆಲಸಗಳು ತೃಪ್ತಿತಂದಿದೆ ಹಾಗೂ ಇದಕ್ಕೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಒಂದು ಟೀಂ ವರ್ಕ್ ಮಾಡಿ ಅನೇಕ ಕಗ್ಗಂಟ್ಟಾಗಿರುವ ಪ್ರಕರಣಗಳನ್ನು ಭೇದಿಸಿದ್ದೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸವಾಲಿನ ಜಿಲ್ಲೆಯಾಗಿದೆ. ಶಿವಮೊಗ್ಗದ ಪ್ರತಿ ತಾಲ್ಲೂಕು ಸಹ ವಿಭಿನ್ನವಾದ ಊರುಗಳನ್ನು ಹೊಂದಿವೆ ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸವಾಲಿನ ರೀತಿಯಲ್ಲಿಯೇ ಕಾಪಾಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.

ಮಾಧ್ಯಮಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ನಾನು ವರ್ಗಾವಣೆಯನ್ನ ಕೋರಿಕೊಂಡ ಹಿನ್ನಲೆಯಲ್ಲಿಯೇ ಸರ್ಕಾರ ವರ್ಗಾವಣೆ ಮಾಡಿದೆ. ಯಾವುದೇ ಒತ್ತಡದ ಹಿನ್ನಲೆಯಲ್ಲಿ ವರ್ಗಾವಣೆಯಾಗಿಲ್ಲ. ನಾನು ಶಿವಮೊಗ್ಗ ಜಿಲ್ಲಾ ಎಸ್ಪಿಯಾಗಿ 20 ತಿಂಗಳು ಸೇವೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು.

ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ನಾವು ಪಾಲಿಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ. ಟೀಕೆ ಟಿಪ್ಪಣಿಗಳು ಸಹ ಸ್ವಾಭಾವಿಕ, ನಮ್ಮ ಕರ್ತವ್ಯವನ್ನು ನಾವು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಿದ್ದೇವೆ ಎಂದರು. ಎನ್‌ಡಿಪಿಎಸ್ ಕಾಯ್ದೆಯಡಿ 3.8. 2019ರಿಂದ 31.12.2019 28 ಪ್ರಕರಣಗಳನ್ನು ದಾಖಲಿಸಿ 56 ಆರೋಪಿತರನ್ನು ಬಂಧಿಸಿ, 14 ಕೆ.ಜಿ ಒಣಗಾಂಜಾ ಹಾಗೂ 138 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಕಂಡಿದ್ದೇವೆ.

2020ರಲ್ಲಿ 89 ಪ್ರಕರಣ ದಾಖಲಿಸಿ 203 ಆರೋಪಿತರನ್ನು ಬಂಧಿಸಿ 41 ಕೆ.ಜಿ. ಮಾದಕವಸ್ತು ಒಣಗಾಂಜಾ, 186ಕೆ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿರುತ್ತೇವೆ. 2021ನೇ ಸಾಲಿನಲ್ಲಿ ಮಾರ್ಚ್ 31ರವರೆಗೆ ಒಟ್ಟು 11 ಪ್ರಕರಣಗಳನ್ನು ದಾಖಲಿಸಿ 25 ಆರೋಪಿತರನ್ನು ಬಂಧಿಸಿ 7 ಕೆ.ಜಿ. ಮಾದಕ ವಸ್ತು ಒಣಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ ಎಂದರು.

3.08.2019ರಿAದ 31.03.2021ರವರೆಗೆ ಒಟ್ಟು 477 ಪ್ರಕರಣಗಳನ್ನು ದಾಖಲಿಸಿ, 585 ಆರೋಪಿಗಳನ್ನು ಬಂಧಿಸಿ ಒಟ್ಟು 21 ಲಕ್ಷ 50 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ. ಇಸ್ಪೀಟ್ ಜೂಜಾಟ ಪ್ರಕರಣದಲ್ಲಿ 3.8.2019 ರಿಂದ 31.3.2021ರವರೆಗೆ 321 ಪ್ರಕರಣ ದಾಖಲಿಸಿ 1936 ಆರೋಪಿಗಳನ್ನು ಬಂಧಿಸಿ ಅವರಿಂದ 55 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 2019,20,21ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ 34 ವರ್ಷಗಳ ಹಳೆಯ ಪ್ರಕರಣಗಳು ಸೇರಿದಂತೆ ಈ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದ 76 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ದೊಡ್ಡ ಸಾಧನೆಯಾಗಿದೆ. ಕೋಟ್ಫಾ ಕಾಯ್ದೆಯಡಿ ಒಟ್ಟು 20 ತಿಂಗಳಲ್ಲಿ ಒಟ್ಟು 16ಸಾವಿರದ 99 ಪ್ರಕರಣಗಳನ್ನು ದಾಖಲಿಸಿ 14 ಲಕ್ಷದ 50 ಸಾವಿರಕ್ಕೂ ಹೆಚ್ಚು ದಂಡವಿಧಿಸಲಾಗಿದೆ.

ಅಬಕಾರಿ ಕಾಯ್ದೆ ಉಲ್ಲಂಘಿಸಿದ 326 ಪ್ರಕರಣಗಳನ್ನು ದಾಖಲಿಸಿ 388 ಆರೋಪಿಗಳನ್ನು ಬಂಧಿಸಿ ಅವರಿಂದ 1572 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಸ್ವತ್ತು ಕಳವು ಪ್ರಕರಣಗಳಲ್ಲಿ ಒಟ್ಟು ಸ್ವತ್ತುಕಳವು ಪ್ರಕರಣಗಳಲ್ಲಿ 554 ಪ್ರಕರಣಗಳನ್ನು ಪತ್ತೆ ಹಚ್ಚಿ 2 ಕೋಟಿಗೂ ಅಧಿಕ ಮೌಲ್ಯದ ಸ್ವತ್ತನ್ನು ವಶಪಡಿಸಕೊಳ್ಳಲಾಗಿದೆ ಎಂದರು.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಪ್ರಕರಣಗಳಲ್ಲಿ ಕೂಡ 19 ಜನರನ್ನು ಬಂಧಿಸಿ 3,58,200 ರೂ.ಗಳನ್ನು ವಶಪಡಿಸಿಕೊಂಡಿದ್ದೇವೆ. ಫೇಸ್ ಮಾಸ್ಕ್ ಧರಿಸದವರ ವಿರುದ್ಧ ಕೂಡ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ, ಒಟ್ಟು 14,900 ಪ್ರಕರಣಗಳನು ದಾಖಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾರಿಗೂ ಕೃತಜ್ಞತೆ ತಿಳಿಸಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಶೇಖರ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here