ಶಿವಮೊಗ್ಗದಲ್ಲಿ ಹೇಗಿದೆ ಗೊತ್ತಾ ರಾಬರ್ಟ್ ಹವಾ..?

0
547

ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ನಗರದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ನಗರದ ವೀರಭದ್ರೇಶ್ವರ ಚಿತ್ರಮಂದಿರ ಮತ್ತು ಮಂಜುನಾಥ ಚಿತ್ರಮಂದಿರದಲ್ಲಿ 4 ಪ್ರದರ್ಶನ ಹಾಗೂ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನ ಹಾಗೂ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲೂ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಬೆಳಿಗ್ಗೆ 7 ಗಂಟೆಗೆ ಫ್ಯಾನ್ಸ್ ಷೋ (ಅಭಿಮಾನಿಗಳಿಗಾಗಿ, ಸಿನಿ ರಸಿಕರಿಗೆ ವಿಶೇಷ ಪ್ರದರ್ಶನ) ಏರ್ಪಡಿಸಲಾಗಿತ್ತು. ದರ್ಶನ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬೃಹತ್ ಗಾತ್ರದ ಹಾರಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ನೆಚ್ಚಿನ ನಟ ಡಿ ಬಾಸ್ ದರ್ಶನ್ ಸಿನಿಮಾ ನೋಡಲು ಬರುವವರು ಉಪವಾಸ ಇರದಂತೆ ದರ್ಶನ್ ಅಭಿಮಾನಿಗಳು ಉಪಹಾರದ ವ್ಯವಸ್ಥೆ ಮಾಡಿದ್ದರು.

ಚಿತ್ರದ ನಾಯಕಿಯಾಗಿ ನಟಿಸಿರುವ ಆಶಾ ಭಟ್ ಜಿಲ್ಲೆಯವರೆ ಆಗಿರುವುದು ವಿಶೇಷವಾಗಿದೆ. ಭದ್ರಾವತಿಯ ಆಶಾ ಭಟ್ ಅವರಿಗೆ ಇದು ನಾಯಕಿಯಾಗಿ ಮೊದಲ ಚಿತ್ರ ಇದಾಗಿದೆ. ಮಿಸ್ ಸುಪ್ರ ಇಂಟರ್‌ನ್ಯಾಷನಲ್ ಅವಾರ್ಡ್ ವಿನ್ನರ್ ಆಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here