ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಹೊಸ ರೈಲು ಸೇವೆ ಆರಂಭ

0
465

ಶಿವಮೊಗ್ಗ: ನೈಋತ್ಯ ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಯಾತ್ರಿ ಕೇಂದ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದ್ದು,‌ ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಿಗೆ ಸಂಸದರಾದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮತ್ತು ಇತರೆ ಗಣ್ಯರು, ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸುವರು.

ಈ ವೇಳೆ ವಿಧಾನ ಪರಿಷತ್ ಶಾಸಕರಾದ ಆಯನೂರ್ ಮಂಜುನಾಥ, ರುದ್ರೇಗೌಡ, ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ ಇತರರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here