ಶಿವಮೊಗ್ಗದಿಂದ 1.26 ಕೋಟಿ ರೂ. ಮೌಲ್ಯದ ಅಡಿಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆ ; ಚಾಲಕನ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ !

0
3936

ಶಿವಮೊಗ್ಗ: ಶಿವಮೊಗ್ಗದಿಂದ ಗುಜರಾತ್‌ನ ಅಹಮದಾಬಾದ್‌ಗೆ 1.26 ಕೋಟಿ ರೂ. ಮೌಲ್ಯದ ಅಡಿಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಿಕೆ ಸಾಗಣೆ ಲಾರಿ ನಾಪತ್ತೆಯಾಗಿದೆ.

ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಅಹಮದಾಬಾದ್‌ಗೆ ಅಡಿಕೆ ಕಳುಹಿಸಲಾಗಿತ್ತು. 350 ಚೀಲದಲ್ಲಿ 245 ಕ್ವಿಂಟಾಲ್ ಅಡಿಕೆಯನ್ನು ಲಾರಿಯಲ್ಲಿ ಕಳುಹಿಸಲಾಗಿದೆ.

ಮೇ 25ರಂದು ಲಾರಿ ಶಿವಮೊಗ್ಗದಿಂದ ತೆರಳಿದೆ. ಮೇ 30ರ ಒಳಗೆ ಅದು ಅಹಮದಾಬಾದ್ ತಲುಪಬೇಕಿತ್ತು. ಆದರೆ ಈ ತನಕ ಲಾರಿ ಅಲ್ಲಿಗೆ ತಲುಪಿಲ್ಲ. ಅಲ್ಲದೆ ಚಾಲಕ ಟಿಪ್ಪು ನಗರದ ಮಹಮ್ಮದ್ ಗೌಸ್ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here