ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ !

0
1063

ಶಿವಮೊಗ್ಗ: ಮೆಗ್ಗಾನ್ ಮಕ್ಕಳ ವಿಭಾಗದ ಒಬಿಜಿಯಲ್ಲಿನ ಐಸಿಯುವಿನಲ್ಲಿರುವ ಎಸಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ.

ಮೆಗ್ಗಾನ್ ಮಕ್ಕಳ ವಾರ್ಡ್‌ನಲ್ಲಿ ಸಿಸೆರಿಯನ್ ಆದವರಿಗೆ ಈ ವಾರ್ಡ್‌ನಲ್ಲಿ ಆಶ್ರಯ ಕೊಡಲಾಗುತ್ತದೆ. ಸಿಸೆರಿನ್ ನಿಂದ ಡೆಲಿವರಿಯಾದ ಮಹಿಳೆ ಮತ್ತು ಮಕ್ಕಳನ್ನ ಒಬಿಜಿ ಐಸಿಯು ವಾರ್ಡ್‌ನಲ್ಲಿ ಶುಶ್ರೂಷೆ ಮಾಡಲಾಗುತ್ತದೆ.

ಆ ವಾರ್ಡ್‌ನಲ್ಲಿದ್ದ ಐಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಬಿದ್ದಿದೆ. ಮೆಗ್ಗಾನ್ ಮಕ್ಕಳ ವಾರ್ಡ್ನಲ್ಲಿ ಐಸಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಬಹುತೇಕ ವಾರ್ಡ್‌ನ ವಿದ್ಯುತ್ ಕಡಿತವಾಗಿದೆ.

ಹೆರಿಗೆ ಮತ್ತು ಸ್ತ್ರೀರೋಗ ತುರ್ತು ಚಿಕಿತ್ಸಾ ಕೊಠಡಿ ಮತ್ತು ಐಸಿಯು ನಲ್ಲಿ ಬೆಂಕಿ ಕಾಣಿಸಿದ್ದು ಗಾಬರಿಗೊಂಡು ಮಕ್ಕಳನ್ನು ಕರೆದುಕೊಂಡು ಬಾಣಂತಿಯರು ಮತ್ತು ಸಂಬಂಧಿಕರು ಹೊರಗೆ ಓಡಿ ಬಂದಿದ್ದಾರೆ.

ಒಬಿಜಿ ವಾರ್ಡ್‌ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಕ್ಕೆ ಕುತ್ತಾಗಿಲ್ಲವೆಂದು ತಿಳಿದುಬಂದಿದೆ.

ಈ ಹಿಂದೆ 2019ರಲ್ಲಿ ಇದೇ ಮಕ್ಕಳ ವಾರ್ಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನಿರ್ದೇಶಕ ಡಾ.ಲೇಪಾಪಕ್ಷಿ ಅವರ ತಲೆದಂಡಕ್ಕೆ ಪ್ರಕರಣವಾಗಿತ್ತು.

ಬೆಂಕಿಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಘಟನೆ ನಡೆದು ಅರ್ಧ ಗಂಟೆ ಕಳೆದಿದೆ. ಈಗ ಯಾರ ತಲೆ ದಂಡವಾಗಲಿದೆ ಎಂಬ ಕುತೂಹಲಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿದ್ದು ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಭೇಟಿ ನೀಡಿದ್ದಾರೆ. ಒಬಿಜಿಯಲ್ಲಿದದ ಉಳಿದ ಉಪಕರಣಗಳನ್ನ ಹೊರಗೆ ತೆಗೆದಿಡಲಾಗುತ್ತಿದೆ.

ಈ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರನ್ ರವರು ಮಾಧ್ಯಮದವರೊಂದಿಗೆ ಮಾತನಾಡಿ, ಐಸಿಯುನಲ್ಲಿ ಇಬ್ಬರು ಬಾಣಂತಿಯರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಕೂಡಲೇ ಇಬ್ಬರನ್ನು ಬಚಾವ್ ಮಾಡಲಾಗಿದೆ. ಎಸಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಐಸಿಯು ವಾರ್ಡ್ ಬಿಟ್ಟು ಹೆರಿಗೆ ವಾರ್ಡ್‌ನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಯಾರು ಕೂಡಾ ಭಯ ಬೀಳುವ ಅಗತ್ಯವಿಲ್ಲ. ಹೆರಿಗೆ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯಲು ಅವರು ಮನವಿ ಮಾಡಿ, ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆ ಬೇರೆ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here