24.3 C
Shimoga
Friday, December 9, 2022

ಶಿವಮೊಗ್ಗ ಎಸ್ಎಂಎಸ್ಎಸ್ಎಸ್ ವತಿಯಿಂದ ಹೊಸನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದಲ್ಲಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ಹೊಸನಗರ ಶಾಖೆಯವರು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಏರ್ಪಡಿಸಿದ್ದು ಸುಮಾರು 300ಕ್ಕೂ ಹೆಚ್ಚು ಜನರು ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಸಮೂಹ ಸಂಸ್ಥೆ ಹಾಗೂ ಸರ್ಜಿ ಫೌಂಡೇಶನ್ ವತಿಯಿಂದ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ತಪಾಸಣೆಗೊಳಪಟ್ಟರು.

ಈ ಉಚಿತ ಆರೋಗ್ಯ ಶಿಬಿರದಲ್ಲಿ ಜನರಲ್ ಫಿಜಿಷಿಯನ್ ಸ್ತ್ರೀ ರೋಗ ತಜ್ಞರು ಮೂಳೆ ರೋಗ ತಜ್ಞರು ಮಕ್ಕಳ ತಜ್ಞರು ಹಾಗೂ ವಿವಿಧ ಹಾಗೂ ವಿವಿಧ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಉಚಿತ ಮಧುಮೇಹ ಪರೀಕ್ಷೆಯೊಂದಿಗೆ ತಪಾಸಣೆ ನಡೆಸಲಾಯಿತು.

ಎಸ್ ಎಂ ಎಸ್ ಎಸ್ ಎಸ್ ನಿರ್ದೇಶಕರಾದ ರೆವೆರೆಂಡ್ ಫಾದರ್ ಡಾ‌. ಕ್ಲಿಫರ್ಡ್ ರೋಷನ್ ಪಿಂಟೋ ಅಧ್ಯಕ್ಷತೆಯಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ್ ಸರ್ಜಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಜನ್ಮಕ್ಕೆ ಎಲ್ಲಾ ಭಾಗ್ಯಕ್ಕಿಂತ ದೊಡ್ಡ ಭಾಗ್ಯ ಆರೋಗ್ಯ ಭಾಗ್ಯ ನಾವು ಎಷ್ಟೇ ಹಣಗಳಿಸಿದರು ಆರೋಗ್ಯ ಏರುಪೇರು ಆದರೆ ನಮ್ಮ ಆಸ್ತಿ ಅಂತಸ್ತು ಅನಾರೋಗ್ಯದ ಮುಂದೆ ನಗಣ್ಯವೆನಿಸುತ್ತದೆ ಆದುದರಿಂದ ಅಬಾಲ ವೃದ್ಧಿಯಾಗಿ ಎಲ್ಲರೂ ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಆರೋಗ್ಯ ಹೊಂದಬೇಕೆಂದರು.

ಎಲ್ಲರೂ ಆರೋಗ್ಯವಂತರಾಗಿರಬೇಕೆಂಬ ದೃಷ್ಟಿಯಿಂದ ಎಲ್ಲಾ ಸಂಘ ಸಂಸ್ಥೆಗಳವರು ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಎಸ್ಎಮ್ಎಸ್ಎಸ್ಎಸ್ ಸಂಯೋಜಕ ಮಧುಸೂಧನ್ ಸ್ವಾಗತಿಸಿದರು. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ತ್ರೀ ಬಂದು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!