23.2 C
Shimoga
Sunday, November 27, 2022

ಶಿವಮೊಗ್ಗ ಘಟನೆ ; ಮೂವರು ಅಂದರ್ !

ಶಿವಮೊಗ್ಗ: ಅ. 24 ರಂದು ರಾತ್ರಿ ಶಿವಮೊಗ್ಗ ನಗರದ ಭರ್ಮಪ್ಪ ನಗರ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು.

ಈ ಪ್ರಕರಣದ ಆರೋಪಿತರಾದ ಮಾರ್ಕೇಟ್ ಫೌಜಾನ್ (22) (ಈತನ ಮೇಲೆ ಈ ಹಿಂದೆ 05 ಪ್ರಕರಣಗಳು ವರದಿಯಾಗಿರುತ್ತವೆ), ಅಜರ್ @ ಅಜ್ಜು (24) (ಈತನ ಮೇಲೆ ಈ ಹಿಂದೆ 03 ಪ್ರಕರಣಗಳು ವರದಿಯಾಗಿರುತ್ತವೆ) ಮತ್ತು ಫರಾಜ್ (21) (ಈತನ ಮೇಲೆ ಈ ಹಿಂದೆ 04 ಪ್ರಕರಣಗಳು ವರದಿಯಾಗಿರುತ್ತವೆ) ರವರನ್ನು ಬಂಧನ ಮಾಡಲಾಗಿದೆ.

ಇವರೊಂದಿಗೆ ಇನ್ನೂ 2 ಜನ ಆರೋಪಿಗಳಿದ್ದು ಇವರನ್ನು ವಶಕ್ಕೆ ಪಡೆದ ನಂತರ ಮಾಹಿತಿಯನ್ನು ನೀಡಲಾಗುವುದು ಎಂದು ಶಿವಮೊಗ್ಗ ಎಸ್ಪಿ ಮಾಹಿತಿ ನೀಡಿದ್ದಾರೆ.

ಈ ಆರೋಪಿಗಳು ಅ.24 ರಂದು ರಾತ್ರಿ 11-00 ಗಂಟೆಗೆ 02 ಬೈಕ್ ಗಳಲ್ಲಿ ಸೀಗೆಹಟ್ಟಿಗೆ ಹೋಗಿ ಪ್ರವೀಣ @ ಕುಲ್ಡಾ ಪ್ರವೀಣನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ 4 ಮತ್ತು 5ನೇ ಆರೋಪಿಗಳನ್ನು ಕ್ಲಾರ್ಕ್ ಪೇಟೆಯಲ್ಲಿ ಬಿಟ್ಟು, ಉಳಿದ ಮೂರು ಜನರು ಭರ್ಮಪ್ಪ ನಗರಕ್ಕೆ ಬಂದು ಪ್ರಕಾಶನಿಗೆ ಅವಾಚ್ಯ ಶಬ್ದಗಳಿಂದ ಬೈದು, ಇಟ್ಟಿಗೆ ಕಲ್ಲಿನಿಂದ ಆತನಿಗೆ ಹಲ್ಲೆ ಮಾಡಿರುತ್ತಾರೆ. ಈಗ್ಗೆ ಕೆಲವು ದಿನಗಳ ಹಿಂದೆ ಪ್ರವೀಣ ಮತ್ತು ಪ್ರಕಾಶ್ ರವರು ಸೇರಿ ಮಾರ್ಕೇಟ್ ಫೌಜಾನ್ ನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ದ್ವೇಶದ ಹಿನ್ನೆಲೆಯಲ್ಲಿ ಈ ಘಟನೆಯು ನಡೆದಿದೆ ಎಂದು ತಿಳಿಸಿದ್ದಾರೆ ತಿಳಿಸಿದ್ದಾರೆ.

ಯಾವುದೇ ಸಂಬಂಧವಿಲ್ಲ :

ಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣ ಮತ್ತು ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಭರ್ಮಪ್ಪ ನಗರ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗಳು ಪ್ರತ್ಯೇಕ ಘಟನೆಗಳಾಗಿದ್ದು, ಇವೆರಡಕ್ಕೂ ಯೌವುದೇ ಸಂಬಂಧವಿರುವುದಿಲ್ಲ.

ಜಯನಗರದ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಮೂರು ಜನ ಆರೋಪಿತರನ್ನು ಪೊಲೀಸ್‌ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದು, ಆರೋಪಗಳು ಸುಲಿಗೆ ಮಾಡುವ ಸಂದರ್ಭದಲ್ಲಿ (ಲಾಭಕ್ಕಾಗಿ) ಕೊಲೆ ಮಾಡಿರುವುದು ತಿಳಿದುಬಂದಿದೆ.

ಈ ಮೂರು ಜನರ ವಿರುದ್ಧ ಈ ಹಿಂದೆಯೂ ಸಹಾ ಸುಲಿಗೆ ಮತ್ತು ಡಕಾಯತಿ ಪ್ರಕರಣಗಳು ವರದಿಯಾಗಿದ್ದು, ವಿಚಾರಣೆಯು ಮುಗಿದ ನಂತರ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!