ಶಿವಮೊಗ್ಗ : ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಡರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇವತ್ತು ಇಡೀ ದಿನ ಭಾರಿ ಮಳೆಯಾಗುವ ಸಂಭವವಿದೆ.
ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಇವತ್ತು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಸುಮಾರು 10 ಸೆಂ.ಮೀ. ನಿಂದ 15 ಸೆಂ.ಮೀ.ನಷ್ಟು ಮಳೆ ಸುರಿಯುವ ಸಂಭವವಿದೆ ಎಂದು ಕೆಪಿಟಿಸಿಎಲ್ ಎಂ.ಆರ್.ಎಸ್. ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್.ಯೋಗೇಶ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಭಾರಿ (6 ಸೆಂ.ಮೀ.) ಮಳೆಯಾಗಲಿದೆ. 10 ಗಂಟೆ ಹೊತ್ತಿಗೆ (5 ಸೆಂ.ಮೀ) ಮಳೆ ಪ್ರಮಾಣ ಸ್ವಲ್ಪ ತಗ್ಗಲಿದೆ. 12 ಗಂಟೆ ನಂತರವು ಮಳೆ ಪ್ರಮಾಣ ಕೊಂಚ ಇಳಿಕೆಯಾಗಲಿದೆ. ಮಧ್ಯಾಹ್ನ 3 ಗಂಟೆಯಿಂದ 4 ಗಂಟೆವರೆಗೂ ಭಾರಿ (10 ಸೆಂ.ಮಿ) ಮಳೆಯಾಗುವ ಸಂಭವವಿದೆ. ಸಂಜೆ 5 ಗಂಟೆಗೂ ಹೆಚ್ಚು ಮಳೆ ಸುರಿಯಲಿದೆ. ರಾತ್ರಿ 7 ಗಂಟೆಯಿಂದ 11 ಗಂಟೆವರೆಗೆ ಜೋರು ಮಳೆಯಾಗಲಿದೆ.
ಮೇ 20ರಂದು ರಾತ್ರಿ 12 ಗಂಟೆಯಿಂದ 2 ಗಂಟೆವರೆಗೆ ಮಳೆಯಾಗಲಿದೆ. ಬೆಳಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಆ ಬಳಿಕ ಮಳೆ ಇರುವುದಿಲ್ಲ. ಆದರೆ ಮೋಡ ಕವಿದ ವಾತಾವರಣವಿರಲಿದೆ ಎಂದು ಯೋಗೇಶ್ ತಿಳಿಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ :
ಜಿಲ್ಲಾದ್ಯಂತ ಅತಿಯಾದ ಮಳೆ ಸುರಿಯುತ್ತಿರುವ ಕಾರಣ ಅಪರ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಮತ್ತು ಉಪನಿರ್ದೇಶಕರು ಆಡಳಿತರವರ ಆದೇಶದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹೊಸನಗರ ಮತ್ತು ಶಿವಮೊಗ್ಗ ತಾಲೂಕಿನ ಎಲ್ಲಾ ಶಾಲೆಗಳಿಗೆ ಈ ದಿನ ಅಂದರೆ ಮೇ.19 ರಂದು ರಜೆ ಘೋಷಿಸಲಾಗಿದೆ ಎಂದು ಶಿವಮೊಗ್ಗ ಮತ್ತು ಹೊಸನಗರ ಬಿಇಓ ತಿಳಿಸಿದ್ದಾರೆ.
Related