ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಮಾ. 01ರಿಂದ 30ರವರೆಗೆ ಒಟ್ಟು 1694 ಪ್ರಕರಣಗಳನ್ನು ದಾಖಲಿಸಿ 2,23,350 ರೂ. ದಂಡ ವಿಧಿಸಿ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ.
ತಾಲ್ಲೂಕುವಾರು ಮಾಹಿತಿ ಕೆಳಕಂಡಂತಿದೆ:
ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 468 ಪ್ರಕರಣಗಳನ್ನು ದಾಖಲಿಸಿ 1,00,750 ರೂ. ದಂಡ ವಿಧಿಸಲಾಗಿದೆ.
ಭದ್ರಾವತಿ ತಾಲ್ಲೂಕಿನಲ್ಲಿ ಒಟ್ಟು 827 ಪ್ರಕರಣಗಳನ್ನು ದಾಖಲಿಸಿ 82,700 ರೂ. ದಂಡ ವಿಧಿಸಲಾಗಿದೆ.
ಸಾಗರ ತಾಲ್ಲೂಕಿನಲ್ಲಿ ಒಟ್ಟು 83 ಪ್ರಕರಣಗಳನ್ನು ದಾಖಲಿಸಿ 8,300 ರೂ. ದಂಡ ವಿಧಿಸಲಾಗಿದೆ.
ಶಿಕಾರಿಪುರ ತಾಲ್ಲೂಕಿನಲ್ಲಿ ಒಟ್ಟು 160 ಪ್ರಕರಣಗಳನ್ನು ದಾಖಲಿಸಿ 16,000 ರೂ. ದಂಡ ವಿಧಿಸಲಾಗಿದೆ.
ಸೊರಬ ತಾಲ್ಲೂಕಿನಲ್ಲಿ ಒಟ್ಟು 67 ಪ್ರಕರಣಗಳನ್ನು ದಾಖಲಿಸಿ 6,700 ರೂ. ದಂಡ ವಿಧಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 44 ಪ್ರಕರಣಗಳನ್ನು ದಾಖಲಿಸಿ 4,400 ರೂ.ದಂಡ ವಿಧಿಸಲಾಗಿದೆ.
ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 45 ಪ್ರಕರಣಗಳನ್ನು ದಾಖಲಿಸಿ 4,500 ರೂ. ದಂಡ ವಿಧಿಸಲಾಗಿದೆ.
Related