24.3 C
Shimoga
Friday, December 9, 2022

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಸಂಘದಿಂದ ನ. 14 ರ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ಆಯೋಜನೆ

ಶಿವಮೊಗ್ಗ : ಜಿಲ್ಲಾ ಕಾರ್ಯನಿರತ ಸಂಘದಿಂದ ನ. 14 ರ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗಾಗಿ ಗಾಗಿ ವಿವಿಧ ಸ್ಪರ್ಧೆಯನ್ನು ಆಯೋಜಿಸಿದೆ.


1 ರಿಂದ 3 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕಂದ ಹೆಸರಿನ ಮಕ್ಕಳ ಪೋಟೋ ಸ್ಪರ್ಧೆ, 1 ರಿಂದ 4 ಮತ್ತು 5 ರಿಂದ 7 ತರಗತಿಯ ಮಕ್ಕಳಿಗೆ ಪ್ರಕೃತಿ ಕುರಿತು ಪ್ರತ್ಯೇಕ ವಿಭಾಗದಲ್ಲಿ ಚಿತ್ರ ಕಲೆ ಸ್ಪರ್ಧೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.


ಮುದ್ದುಕಂದ ಸ್ಪರ್ಧೆಗೆ ಪೋಟೋ ಕಳುಹಿಸುವವರು 8X12 ಸೈಜ್‌ನ ಮಗುವಿನ ಭಾವಚಿತ್ರದ ಹಾರ್ಡ್ ಕಾಪಿಯನ್ನು ನ. 11 ರೊಳಗೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್, ಪತ್ರಿಕಾ ಭವನ, ಆರ್‌ಟಿಒ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಆವರಣ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಇಲ್ಲವೇ ಅಂಚೆ ಅಥವಾ ಕೋರಿಯರ್ ಮೂಲಕ ಕಳುಹಿಸಬಹುದು.

ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಮಾಧ್ಯಮಗಳು ಸಾಗುತ್ತಿರುವ ಹಾದಿ-ಯಾವುದು ಸರಿ? ಯಾವುದು ತಪ್ಪುು, ಏಕೆ?” ಎಂಬ ವಿಷಯ ಕುರಿತು ಸ್ಪರ್ಧೆ ಆಯೋಜಿದ್ದು, [email protected] ಇ-ಮೇಲ್ ವಿಳಾಸಕ್ಕೆ ನುಡಿ ಅಥವಾ ಯುನಿಕೋಡ್ ಫಾಂಟ್‌ನಲ್ಲಿ ಇ-ಮೇಲ್ ಕಳುಹಿಸಬೇಕು ಹಾಗೂ ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಸ್ಪರ್ಧೆಯ ಅಂತಿಮ ನಿರ್ಧಾರ ಸಂಘದ ಆಡಳಿತ ಮಂಡಳಿಗೆ ಒಳಪಟ್ಟಿರುತ್ತದೆ.


ಹೆಚ್ಚಿನ ಮಾಹಿತಿಗೆ ಮೊ.ನಂ.ಗೋಪಾಲ್ ಯಡಗೆರೆ, ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ (9108825454) ಹಾಗೂ ಸಂತೋಷ್ ಕಾಚಿನಕಟ್ಟೆ ಪ್ರಧಾನ ಕಾರ್ಯದರ್ಶಿ (9341126340) ಇವರನ್ನು ಅಥವಾ ಇ-ಮೇಲ್ ವಿಳಾಸ [email protected] ಅನ್ನು ಸಂಪರ್ಕಿಬಹುದು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!