ಶಿವಮೊಗ್ಗ ಜಿಲ್ಲೆಯ ಈ ಗ್ರಾಪಂಗಳಿಗೆ ಉಪ ಚುನಾವಣೆ ಡೇಟ್ ಫಿಕ್ಸ್

0
521

ಶಿವಮೊಗ್ಗ: ವಿವಿಧ ಕಾರಣಗಳಿಂದ ತೆರವಾದಂತ ಜಿಲ್ಲೆಯ ಕೆಲ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಗಳಿಗೆ, ಉಪ ಚುನಾವಣೆ ಘೋಷಣೆಯಾಗಿದೆ. ಮೇ.20ರಂದು ಮತದಾನ ನಡೆಯಲಿದ್ದು, ಮೇ.22ರಂದು ಮತ ಏಣಿಕೆ ಕಾರ್ಯ ನಡೆಯಲಿದೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಶಿವಮೊಗ್ಗ ಜಿಲ್ಲೆಯ ಈ ಕೆಳಕಂಡ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಹೊರಡಿಸಿರೋದಾಗಿ ತಿಳಿಸಿದ್ದಾರೆ.

ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 10-05-2022 ಆಗಿದೆ. ದಿನಾಂಕ 11-05-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 13-05-2022ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 20-05-2022ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ.

ಮರು ಮತದಾನ ಅವಶ್ಯಕತೆಯಿದ್ದಲ್ಲಿ, ದಿನಾಂಕ 21-05-2022ರಂದು ನಡೆಸಲಾಗುತ್ತದೆ. ದಿನಾಂಕ 22-05-2022ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಏಣಿಕೆ ಕಾರ್ಯ ನಡೆಯಲಿದೆ. ದಿನಾಂಕ 22-05-2022ರಂದು ಚುನಾವಣೆ ಮುಕ್ತಾಯಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಉಪ ಚುನಾವಣೆ ನಡೆಯಲಿರುವ ಸ್ಥಾನಗಳ ವಿವರ‌:

  1. ಶಿವಮೊಗ್ಗ ತಾಲೂಕು – ಬಾಳೇಕೊಪ್ಪ ಗ್ರಾಮ ಪಂಚಾಯ್ತಿ, ಅನುಸೂಚಿತ ಪಂಗಡದ ಮಹಿಳೆಗೆ ಮೀಸಲು

  2. ಸಾಗರ ತಾಲೂಕು – ಗೌತಮಪುರ ಗ್ರಾಮ ಪಂಚಾಯ್ತಿ – ಅನುಸೂಚಿತ ಪಂಗಡದ ಮಹಿಳೆಗೆ ಮೀಸಲು

  3. ಸಾಗರ ತಾಲೂಕಿನ ಸೈದೂರು ಗ್ರಾಮ ಪಂಚಾಯ್ತಿ, ಹಿಂದುಳಿದ ವರ್ಗದ ‘ಬ’ ಗೆ ಮೀಸಲು

  4. ಶಿಕಾರಿಪುರ ತಾಲೂಕು – ಗೊಗ್ಗ ಗ್ರಾಮ ಪಂಚಾಯ್ತಿ, ಅನುಸೂಚಿತ ಪಂಗಡದ ಮಹಿಳೆಗೆ ಮೀಸಲು

  5. ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮ ಪಂಚಾಯ್ತಿ – ಸಾಮಾನ್ಯ ಮಹಿಳೆಗೆ ಮೀಸಲು

ಜಾಹಿರಾತು

LEAVE A REPLY

Please enter your comment!
Please enter your name here