ಶಿವಮೊಗ್ಗ ಟೈಮ್ಸ್ ಸಂಸ್ಥಾಪಕ ಕೆ.ಬಿ.ರಾಮಪ್ಪ ನಿಧನಕ್ಕೆ ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ಸಂತಾಪ

0
220

ರಿಪ್ಪನ್‌ಪೇಟೆ: 1974 ಅಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಕೆ.ಬಿ.ರಾಮಪ್ಪನವರು ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಟೈಮ್ಸ್ ಸಂಸ್ಥಾಪಕರಾಗಿ ಅಂದಿನಿಂದ ಆರಂಭವಾದ ಪತ್ರಿಕೆ ಅಂದೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹ ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿದ್ದು ಅದರ ಸಕ್ರಿಯ ಸದಸ್ಯರಾಗಿ ಕೆ.ಬಿ.ರಾಮಪ್ಪ ಜಿಲ್ಲೆಯಲ್ಲಿ ಉತ್ತಮವಾಗಿ ಪತ್ರಕರ್ತರ ಸಮಸ್ಯೆಗಳೊಂದಿಗೆ ತಮ್ಮದೆ ಚಾಪು ಮೂಡಿಸಿದರು. ಇವರ ನಿಧನದಿಂದಾಗಿ ಪತ್ರಕರ್ತರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ (ವಿಶ್ರಾಂತ) ಪತ್ರಕರ್ತ ಎಸ್.ಜಿ.ರಂಗನಾಥ ಸಂತಾಪ ವ್ಯಕ್ತಪಡಿಸಿ ಅವರ ಕುಟುಂಬಕ್ಕೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here