ಶಿವಮೊಗ್ಗ: ಸಮಾಜವನ್ನು ಸುಂದರವನ್ನಾಗಿ ರೂಪಿಸಿ ಜಗತ್ತಿಗೆ ತೋರಿಸುತ್ತಿರುವವರು ಬ್ಯೂಟಿಷಿಯನ್ಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಬ್ಯೂಟಿಷಿಯನ್ಸ್ ಅಸೋಸಿಯೇಷನ್ಗೆ ಇಂದು ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಕಾಲಘಟ್ಟದಲ್ಲಿ ಎಲ್ಲಾ ವೃತ್ತಿಯವರೂ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಮಯದಲ್ಲಿ ಸಂಘಟನಾತ್ಮಕವಾಗಿ ಮುನ್ನಡೆಯುವುದು ಸರಿಯಾಗಿದೆ. ಈ ನಿಟ್ಟಿನಲ್ಲಿ ಅಸೋಸಿಯೇಷನ್ ಸೂಕ್ತವಾಗಿದೆ. ಇದಕ್ಕೆ ಅರ್ಹ ಬ್ಯೂಟಿಷಿಯನ್ಗಳು ಹೆಚ್ಚೆಚ್ಚು ಸದಸ್ಯರಾಗಬೇಕು ಎಂದ ಅವರು, ಬ್ಯೂಟಿಷಿಯನ್ಗಳಿಗೆ ಸರ್ಕಾರದ ಯೋಜನೆಗಳು, ಕೋವಿಡ್ ಸಮಯದಲ್ಲಿ ಆಹಾರದ ಕಿಟ್ ಇತ್ಯಾದಿ ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಬ್ಯೂಟಿಷಿಯನ್ಗಳನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಕಾರ್ಮಿಕ ಅಧಿಕಾರಿ ವಿಶ್ವನಾಥ್ಗೆ ಸೂಚಿಸಿದರು.
ತಾಲೂಕು ಬ್ಯೂಟಿಷಿಯನ್ಸ್ ಅಸೋಸಿಯೇಷನ್ ಅಧ್ಯಕ್ಷೆ ರೇಖಾ ಸತೀಶ್ ಅಧ್ಯಕ್ಷತೆವಹಿಸಿದ್ದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಮಹಾನಗರಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಶಿವಮೊಗ್ಗ ಮಹಾಪೌರೆ ಸುನೀತಾ ಅಣ್ಣಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್, ಆಲ್ ಕರ್ನಾಟಕ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ಎನ್. ನಾಗವೇಣಿ (ವಾಣಿ), ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ, ಮಾಜಿ ನಗರಸಭಾ ಸದಸ್ಯ ಮೋಹನ್, ಶಿವಮೊಗ್ಗ ೨ನೇ ವೃತ್ತದ ಲೇಬರ್ ಇನ್ಸ್ಪೆಕ್ಟರ್ ಪಿ. ಭೀಮೇಶ್ ವೇದಿಕೆಯಲ್ಲಿದ್ದರು.
ಉಡುಪಿ ಮಹಿಳಾ ಸೌಂದರ್ಯ ತಜ್ಞರ ಸಂಘದ ಜಿಲ್ಲಾಧ್ಯಕ್ಷೆ ವೇದಾ ಎಸ್. ಸುವರ್ಣ, ಇಂಟರ್ನ್ಯಾಷನಲ್ ಅವಾರ್ಡ್ ವಿನ್ನರ್ ಬಳ್ಳಾರಿಯ ಸಂಧ್ಯಾರಾಣಿ, ಬ್ಯೂಟಿಷಿಯನ್ಗಳಾದ ಶಿಕಾರಿಪುರದ ವಿಜಯಲಕ್ಷ್ಮೀ, ಕಡೂರು-ಬೀರೂರಿನ ಸುಧಾ, ತೀರ್ಥಹಳ್ಳಿಯ ಸ್ವಾತಿ, ಉಷಾ, ಆನಂದಪುರದ ಸುಗುಣಾ, ಚಿತ್ರದುರ್ಗದ ಸುರೇಖಾ, ಸಾಗರದ ಗೀತಾ, ಹೊಸನಗರದ ಸೀಮಾ, ಕಮ್ಮರಡಿ- ಕೊಪ್ಪದ ಮಮತಾ, ಶೃಂಗೇರಿಯ ಸುಪ್ರೀತಾ ವಾಸು, ರಿಪ್ಪನ್ಪೇಟೆಯ ಬಿ.ಪಿ. ಶಶಿಕಲಾ, ಹೊನ್ನಾಳಿಯ ನಾಗರತ್ನಾ, ಸುಮಾ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.