ಶಿವಮೊಗ್ಗ ದಸರಾ ಮೆರವಣಿಗೆಗೆ ಈ ಬಾರಿ ಮತ್ತಷ್ಟು ಮೆರಗು !

0
573

ಶಿವಮೊಗ್ಗ: ಶಿವಮೊಗ್ಗ ದಸರಾ ಮೆರವಣಿಗೆಗೆ ಈ ಬಾರಿ ಮತ್ತಷ್ಟು ಮೆರಗು ಬರಲಿದೆ. ಎಂದಿನಂತೆ ಈ ಬಾರಿಯೂ ಸಕ್ರೆಬೈಲ್ ಆನೆ ಬಿಡಾರದ ಗಜಪಡೆ ಆಗಮಿಸಲಿದ್ದು, ಇದಕ್ಕಾಗಿ ಈಗಾಗಲೇ ತಯಾರಿ ನಡೆಯುತ್ತಿದೆ.

ಮೆರವಣಿಗೆಯಲ್ಲಿ ಈ ಬಾರಿ ಬಾನುಮತಿ ಮತ್ತು ಸಾಗರ್ ಆನೆಗಳು ಭಾಗಿಯಾಗಲಿವೆ. ಈ ಬಾರಿ ಸಾಗರ್ ಆನೆ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹವನ್ನೊಳಗೊಂಡ ಅಂಬಾರಿ ಹೊರಲಿದ್ದು, ದಸರಾ ಮೆರವಣಿಗೆಗೆ ಮೆರುಗು ನೀಡಲಿದ್ದು, ಶಿವಮೊಗ್ಗದ ದಸರಾ ವೈಭವದ ಮೆರವಣಿಗೆ ಮೈಸೂರು ದಸರಾ ನೆನಪಿಸಲಿದೆ.

ಇಂದು ಸಕ್ರೆಬೈಲ್ ವನ್ಯಜೀವಿ ವಿಭಾಗಕ್ಕೆ ತೆರಳಿದ ದಸರಾ ಉತ್ಸವ ಸಮಿತಿ ಸದಸ್ಯರು ಗಜಪಡೆಗೆ ಪೂಜೆ ಸಲ್ಲಿಸಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಆಹ್ವಾನ ನೀಡಿದರು. ಆನೆಗಳಿಗೆ ವಿಶೇಷವಾಗಿ ಹೂ ಮಾಲೆ ಹಾಕಿ, ಕುಂಕುಮವನ್ನಿಟ್ಟು ಪೂಜೆ ನೆರವೇರಿಸಲಾಯಿತು. ಮಾವುತರು ಇದಕ್ಕೆ ಸಹಕರಿಸಿದರು.

ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸದಸ್ಯರಾದ ಚನ್ನಬಸಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಜ್ಞಾನೇಶ್ವರ್, ನಾಗರಾಜ್, ಆರತಿ ಆ.ಮ. ಪ್ರಕಾಶ್, ಭಾನುಮತಿ ವಿನೋದ್, ಸಂಗೀತಾ, ಕಲ್ಪನಾ ರಾಮು ಹಾಗೂ ಡಾ. ವಿನಯ್ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here