ಶಿವಮೊಗ್ಗ: ನಾಗರಿಕರಲ್ಲಿ ಕೆಲ ಸಮಯ ಆತಂಕ ಸೃಷ್ಟಿದ ಲಾರಿ: ಹಾಗಾದ್ರೆ ಲಾರಿಯಲ್ಲಿ ಅಂತದ್ದೇನಿತ್ತು?

0
10290

ಶಿವಮೊಗ್ಗ: ನಗರದ ಹೊರವಲಯ ರಸ್ತೆಯಲ್ಲಿ ಶನಿವಾರ ನಿಂತಿದ್ದ 10 ಟನ್‌ ಸ್ಫೋಟಕಗಳನ್ನು ತುಂಬಿದ್ದ ಲಾರಿ ಕೆಲ ಸಮಯ ನಾಗರಿಕರಲ್ಲಿ ಆತಂಕ ಸೃಷ್ಟಿಸಿತು.

ತೀರ್ಥಹಳ್ಳಿ ರಸ್ತೆಯಿಂದ ಸಹ್ಯಾದ್ರಿ ಕಾಲೇಜು ಮಾರ್ಗದ ಬಳಿಯ ಟಯರ್ ದುರಸ್ತಿ ಅಂಗಡಿಯ ಮುಂದೆ ಲಾರಿ ನಿಲ್ಲಿಸಿದ ಚಾಲಕ, ಟಯರ್ ಬದಲಿಸಲು ಹೇಳಿ ಊಟಕ್ಕೆ ತೆರಳಿದ್ದ. ಲಾರಿ ಉಡುಪಿ ಜಿಲ್ಲೆ ಹೆಬ್ರಿಯಿಂದ ಬಂದಿತ್ತು. ಚಿತ್ರದುರ್ಗಕ್ಕೆ ಡಿಟೊನೇಟರ್, ಜಿಲಿಟಿನ್ ಕಡ್ಡಿ ಸರಬರಾಜು ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಅಧಿಕೃತ ಪರವಾಗಿ ಇದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆ. ಪ್ರತಿ ಸ್ಫೋಟಕ ಸಾಮಗ್ರಿಗಳನ್ನೂ ಪ್ರತ್ಯೇಕವಾಗಿ ಇರಿಸಲಾಗಿದ್ದು ಇದರಲ್ಲಿ ಕೆಲ್ವಿಕ್ಸ್ 220 ಮಾದರಿಯ 1500 ಕೆ.ಜಿ ತೂಕದ ಜಿಲೆಟಿನ್ ಕಡ್ಡಿಗಳಿದ್ದವು ಎಂದು ವಾಹನ ತಪಾಸಣೆ ಮಾಡಿದ ಡಿವೈಎಸ್‌ಪಿ ಪ್ರಶಾಂತ್ ಮುನೋಳಿ ಮಾಹಿತಿ ನೀಡಿದ್ದಾರೆ.

ಇದೇ ವರ್ಷ ಜ.21ರಂದು ನಡೆದಿದ್ದ ಹುಣಸೋಡು ಸ್ಫೋಟದ ಲಾರಿಯೂ ಆಂಧ್ರಪ್ರದೇಶದ ರಾಯದುರ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದಿತ್ತು. ಊಟಕ್ಕೆ ಅವರು ಸವಳಂಗ ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ಎಲ್ಲ ಕಹಿನೆನಪುಗಳಿಂದ ಬೆದರಿದ್ದ ಜನರು ಹೊರವಲಯದಲ್ಲಿ ಲಾರಿ ಕಂಡು ಭಯಭೀತರಾಗಲು ಕಾರಣವಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here