ಶಿವಮೊಗ್ಗ: ಶಿವಮೊಗ್ಗ ಡಿವೈಎಸ್ಪಿಯಾಗಿ ಬಾಲರಾಜ್ ಅವರು ಇಂದು ಅಧಿಕಾರ ವಹಿಸಿಕೊಂಡರು.
ಕಳೆದ 12ದಿನಗಳ ಹಿಂದೆಯೇ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಕೆಲ ಅಡೆತಡೆಗಳ ನಡುವೆ ಇಂದು ಬಾಲರಾಜ್ ಅವರು ಅಧಿಕಾರ ವಹಿಸಿಕೊಂಡರು.
ಬಾಲರಾಜ್ ಅವರು ಬೆಂಗಳೂರಿನ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿರುವ ಬಾಲರಾಜ್ ಅವರು ಶಿವಮೊಗ್ಗದಲ್ಲಿ ರೌಡಿಗಳ ಹೆಡೆಮುರಿ ಕಟ್ಟಿದ್ದರು ಹಾಗೂ ನಕ್ಸಲ್ ಚಟುವಟಿಕೆಯನ್ನು ತಲೆಯೆತ್ತದಂತೆ ಮಾಡಿದ್ದರು.