ಶಿವಮೊಗ್ಗ ಬಳಿ ಭೀಕರ ರಸ್ತೆ ಅಪಘಾತ; ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವು !

0
1001

ಶಿವಮೊಗ್ಗ : ಶಿವಮೊಗ್ಗ ನಗರದ ಆಲ್ಕೊಳ ವೃತ್ತಕ್ಕೆ ಹತ್ತಿರ ವಿನೋಬನಗರಕ್ಕೆ ಹೋಗುವ ರಿಂಗ್ ರೋಡ್ ನಲ್ಲಿ ಭಾರತೀಯ ಆಹಾರ ನಿಗಮದ ಗೋಡೌನ್ ನ ಸಮೀಪದ ಇಳಿಜಾರಿನಲ್ಲಿ ಇದೀಗ ಪೋಲಿಸ್ ಚೌಕಿ ಕಡೆಯಿಂದ ಇಬ್ಬರು ಯುವಕರು KA-14 EW 9132 Hero X Pulse ಎಂಬ ನೂತನವಾದ ದ್ವಿಚಕ್ರ ವಾಹನವನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಆಲ್ಕೊಳ ಕಡೆಗೆ ತಿರುಗುವ ಅರಣ್ಯ ಇಲಾಖೆಯ ಗೋಡೆ ಶುರುವಾಗುವ ತಿರುವಿನಲ್ಲಿ ರಸ್ತೆಯ ವಿಭಜನೆಕ್ಕೆ ಮೊದಲು ಡಿಕ್ಕಿಹೊಡೆದು ನಂತರ ಗಾಡಿಯು ಮೇಲಕ್ಕೆ ಹಾರಿದಾಗ ಇಬ್ಬರೂ ಯುವಕರು ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ತಲೆಯ ಹಿಂಭಾಗದಲ್ಲಿ ತೀವ್ರತರವಾದ ಹೊಡೆತ ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಪ್ರಾಣಕಳೆದುಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿಯಾದ ಮೃತ ಅಭಯ್ ಮತ್ತು ಕೋಟೆ ಗಂಗೂರಿನ ನಿವಾಸಿಯಾದ ಮೃತ ವರುಣ್ ಇಬ್ಬರು 19ರ ಆಸುಪಾಸಿನ ಯುವಕರುಗಳು.

ಪ್ರಿಯದರ್ಶಿನಿ ಕಾಲೇಜಿನ ವಿಧ್ಯಾರ್ಥಿಗಳಾದ ಇವರು ಸಹಪಾಠಿಗಳು. ಗೋಪಾಳದಲ್ಲಿರು ಅಭಯ್ ಮನೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ.

ಹೆಲ್ಮೆಟ್ ಧರಿಸದಿದ್ದದ್ದಕ್ಕೆ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಅಸುನೀಗಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ‌.

ವರದಿ : ಓಂಕಾರ ಎಸ್. ವಿ. ತಾಳಗುಪ್ಪ
ಜಾಹಿರಾತು

LEAVE A REPLY

Please enter your comment!
Please enter your name here