ಶಿವಮೊಗ್ಗ ಭವಿಷ್ಯದ ದಿನದಲ್ಲಿ ಎಜುಕೇಶನ್, ಪ್ರವಾಸೋದ್ಯಮ ಹಬ್ ಆಗಲಿದೆ ; ಬಿ.ವೈ. ರಾಘವೇಂದ್ರ

0
116

ಶಿವಮೊಗ್ಗ : ಮೆಡಿಕಲ್, ಅಗ್ರಿಕಲ್ಚರ್ / ಹಾರ್ಟಿಕಲ್ಚರ್ ಆಯುಷ್ ಹಾಗೂ ಇನ್ನಿತರ ಕಾಲೇಜುಗಳು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ, ವಿಶ್ವ ವಿಖ್ಯಾತ ಜೋಗ, ಶಂಕರರ ತಪೋ ಭೂಮಿ ಕೊಡಚಾದ್ರಿ, ಪುರಾತನ ದೇವಸ್ಥಾನ ಹಾಗೂ ಶಿವ ಶರಣ/ ಶರಣೆಯರ ಜನ್ಮ ಸ್ಥಳ ಅಭಿವೃದ್ಧಿ ಮಾಡುತ್ತಿದ್ದೇವೆ. ಸಮಯವೇ ದುಡ್ಡು ಅನ್ನುವ ಉದ್ಯಮಿಗಳಿಗೆ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಕಲ್ಪಿಸಿ ಇಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಮುಂದಿನ ದಿನದಲ್ಲಿ ಶಿವಮೊಗ್ಗ ಎಜುಕೇಶನ್, ಪ್ರವಾಸೋದ್ಯಮ ಹಬ್ ಆಗಲಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗದ ಪ್ರತಿಷ್ಟಿತ ವಿದ್ಯಾ ಸಂಸ್ಥೆಯಾದ ಪ್ರೇರಣಾ ಎಜುಕೇಷನಲ್ & ಸೋಶಿಯಲ್ ಟ್ರಸ್ಟ್ ವತಿಯಿಂದ ಪ್ರೇರಣಾ ಕನ್ವೆಂಷನ್ ಸಭಾಂಗಣದಲ್ಲಿ 2021-22 ಶೈಕ್ಷಣಿಕ ವರ್ಷದ “ಆಫರ್ ಲೆಟರ್” ವಿತರಣಾ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ವಿತರಿಸಿದರು.

“ಸಾಧನೆಗೆ ಯಾವುದೇ ಒಳ ದಾರಿಗಳಿಲ್ಲ , ಕಠಿಣ ಪರಿಶ್ರಮ ಹಾಗೂ ವಿಷಯವನ್ನು ಗ್ರಹಿಸುವ ಸಾಮರ್ಥ್ಯದಿಂದ ಒಬ್ಬ ವಿದ್ಯಾರ್ಥಿ ಸಾಧನೆ ಮಾಡುತ್ತಾನೆ, ಮೆಟ್ರೋ ಪೊಲೀಟನ್ ನಗರದಲ್ಲಿ ಈ ರೀತಿಯ ದೊಡ್ಡ ಮಟ್ಟದ ಆಯ್ಕೆ ಆಗಿರುವುದು ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ತೋರಿಸುತ್ತದೆ.‌ ವಿವಿಧ ದೇಶಿಯ ಹಾಗೂ ವಿದೇಶಿ ಕಂಪನಿಗಳಿಗೆ ಆಯ್ಕೆ ಆಗಿರುವ 650+ ವಿದ್ಯಾರ್ಥಿಗಳಿಗೆ ಶುಭವಾಗಲಿ “

– ಬಿ.ವೈ ರಾಘವೇಂದ್ರ ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕಿಮ್ಮನೆ ಗಾಲ್ಫ್ ರೆಸಾರ್ಟ್ ಮತ್ತು ಕಿಮ್ಮನೆ ಗಾಲ್ಫ್ ಟೆರೈನ್ ಅಧ್ಯಕ್ಷರಾದ ಜೈರಾಮ್ ಜಿ ಕಿಮ್ಮನೆ ಅವರು ಆಗಮಿಸಿ, ವಿದ್ಯಾರ್ಥಿಗಳಿಗೆ ಉದ್ಯಮ ಹಾಗೂ ಉದ್ಯಮಿಯ ಸವಾಲು ಹಾಗೂ ಶಿವಮೊಗ್ಗ ಜಾಗತಿಕ ಮಟ್ಟದಲ್ಲಿ ಮುಂದಿನ ದಿನದಲ್ಲಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.

ಪ್ರಾಂಶುಪಾಲಾರದ ಡಾ. ಚೈತನ್ಯ ಕುಮಾರ್. ಸಿಸಿಎ ಡಾ ನಾಗರಾಜ್, ಸಾಯಿಲತಾ ಕೆ, ಪ್ರೊ. ಗೌತಮ್, ಸಿಡಿಸಿ ಪ್ರಮುಖರದ ಡಾ. ಪ್ರಸನ್ನ ಕುಮಾರ್, ಪ್ಲೇಸ್ಮೆಂಟ್ ನಿರ್ದೇಶಕರಾದ ಡಾ‌. ಅರುಣಾ ಮತ್ತಿತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here