ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

0
430

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಉಪಮೇಯರ್ ಶಂಕರ್ ಗನ್ನಿ ತುಕ್ಕು ಹಿಡಿದ ಪಾಲಿಕೆ ಆಡಳಿತದ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಅದರಂತೆ ಜನನ-ಮರಣ, ಖಾತೆ, ಕಂದಾಯ ಪಾವತಿ ಕಟ್ಟಡ ಅಂಗಡಿ ಮುಂಗಟ್ಟುಗಳ ಲೈಸನ್ಸ್ ಗಾಗಿ, ಸರ್ವರ್ ಪ್ರಾಬ್ಲಂ ನೆಪ ಹೇಳುತ್ತಿದ್ದ ಅಧಿಕಾರಿ, ಕೇಸ್ ವರ್ಕರ್‌ಗಳ ಬಾಯಿಗೆ ಬೀಗ ಹಾಕುವ ನಿಟ್ಟಿನಲ್ಲಿ ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಬದಲಿಸಿ ಏರ್ ಟೆಲ್ ಗೆ ಬದಲಾಯಿಸಿ ಶೀಘ್ರವಾಗಿ‌ ಸಾರ್ವಜನಿಕರಿಗೆ ದಾಖಲೆ ಸಿಗುವಂತೆ ಮಾಡಿದ್ದಾರೆ.

ಪಾಲಿಕೆಯ ಎಲ್ಲಾ ವಿಭಾಗಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬದ ಬಗ್ಗೆ ಖುದ್ದು ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

ಈಗಾಗಲೇ ಕಂದಾಯ ಪಾವತಿಸುವ ಕೌಂಟರ್ ನಿರ್ಮಿಸಿ ಛಾವಣಿ. ಕುರ್ಚಿ ಹಾಕಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ..ಹಲವು ವಾರ್ಡಗಳಲ್ಲಿ ಸಂಚರಿಸಿ ಅಲ್ಲಿನ ಸಮಸ್ಯೆಗಳು. ಕುಂದು-ಕೊರತೆಗಳ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳತ್ತಿದ್ದಾರೆ.

ಇನ್ನು ಕಸ ವಿಲೇವಾರಿಗೆ ನೂತನ ಕ್ರಮ ಅನುಸರಿಸಲು ಯೋಜನೆ ರೂಪಿಸಲಾಗಿದೆ. ಹಾಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ಅವರ ವೇತನವನ್ನು ನೇರವಾಗಿ ಅವರ ಖಾತೆಗೆ ನೀಡಲು ಕ್ರಮ. ಹೀಗೆ ಹತ್ತು ಹಲವು ನೂತನ ಯೋಜನೆಗಳ ಯೋಚನೆಯಿಂದ ಗಮನಾರ್ಹ ಸಾಧನೆ ಮಾಡಲು ಹೊರಟಿರುವ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹಾಗು ಉಪಮೇಯರ್ ಶಂಕರ್ ಗನ್ನಿಯವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ.

ಅದೇ ರೀತಿ ಕಂದಾಯ ಪಾವತಿಗೆ ಶೇ.5ರ ರಿಯಾಯಿತಿಯನ್ನೂ ಕೂಡ ಇನ್ನೂ ಮೇ ಅಂತ್ಯದವರೆಗೆ ವಿಸ್ತರಿಸುವಂತೆ ಹಾಗೂ ಇಂಡಿಯನ್ ಬ್ಯಾಂಕ್ ಕಂದಾಯ ಪಾವತಿ ಕೇಂದ್ರದಲ್ಲಿ ಇನ್ನೊಂದು ಹೆಚ್ಚುವರಿ ಕೌಂಟರ್‌ನ್ನು ಆಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here