ಶಿವಮೊಗ್ಗ ವಲಯದ 07 ಮಂದಿ ಹೈವೇ ಪಟ್ರೋಲಿಂಗ್ ಸಿಬ್ಬಂದಿಗಳು ಸಸ್ಪೆಂಡ್ ! ಯಾಕ್ ಗೊತ್ತಾ ?

0
945

ಶಿವಮೊಗ್ಗ :‌‌ ಪೊಲೀಸ್ ಇಲಾಖೆಯಲ್ಲಿ ಹಲವು ಮಹತ್ತರ ಹುದ್ದೆಗಳಿವೆ. ಅವು‌ ಅಕ್ರಮ ಪತ್ತೆ ಹಚ್ಚುವ ಜೊತೆ ಹಣದ ವ್ಯವಹಾರ ಮಾಡುವ ಸಲೀಸಾದ ಹುದ್ದೆಗಳು. ಕಣ್ಣಿಗೆ ಕಾಣುವ ಹೆಲ್ಮೆಟ್ ಪರಿಶೀಲನೆಯೂ ಅದರ ಒಂದು ಸಣ್ಣ ಭಾಗವಷ್ಟೇ..!‌

ಈ ಪೀಠಿಕೆಗೆ ಕಾರಣ ಇತ್ತೀಚೆಗೆ ಶಿವಮೊಗ್ಗ ವಲಯದಲ್ಲಿ ಏಳು ಪೊಲೀಸ್ ಸಿಬ್ಬಂದಿಗಳು ಸಸ್ಪೆಂಡ್ ಆಗಿದ್ದಾರೆ. ಸುದ್ದಿ ಸದ್ದಾಗಿಲ್ಲ. ಅವರು ಹಗಲು ರಾತ್ರಿ ಅಕ್ರಮ ವ್ಯವಹಾರದ ವಾಹನಗಳ ತಪಾಸಣೆ ನಡೆಸುವುದಾಗಿದೆ. ಅಂದರೆ ಹೈವೇ ಪಟ್ರೋಲಿಂಗ್ ನಲ್ಲಿ ಕೆಲಸ ಮಾಡಿತ್ತಿದ್ದ ಏಳು ಪೊಲೀಸ್ ಕಾನ್ಸ್ ಸ್ಟೇಬಲ್ಸ್ ಗಳು ಹಣ ವಸೂಲಿ ಮಾಡಿದ ವಿಚಾರ ಸಾಕ್ಷಿ ಸಹಿತ ಎಸ್ಪಿ ಲಕ್ಷ್ಮಿಪ್ರಸಾದ್ ಅವರ ಕೈಗೆ ಸಿಕ್ಕಿದೆ. ಯಾವುದೇ ಮುಲಾಜಿಲ್ಲದೇ ಎಸ್ಪಿ ಅವರನ್ನು‌ ಮನೆಗೆ ಕಳುಹಿಸಿದ್ದಾರೆ.

ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಬರುವ ಅಕ್ರಮ ಸಾಗಾಣಿಕೆಯ‌ ಮರಳು ಲಾರಿಗಳ ತಪಾಸಣೆಯಲ್ಲಿ ಹಣ ಪಡೆದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ.

ಹೈವೇ ಪಟ್ರೋಲಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಾದ ಸುರೇಶ್,‌ ಸುದರ್ಶನ್, ನಾಗರಾಜ್, ಗಂಗಾಧರ್, ಲೋಕೇಶ್, ಬಸವಲಿಂಗಪ್ಪ ಹಾಗೂ‌ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಮಾ.14 ರ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗೃಹಸಚಿವರ ತವರು ಜಿಲ್ಲೆಯಲ್ಲಿ ತವರು ಕ್ಷೇತ್ರದ ಮರಳು ಅಕ್ರಮ ಸಾಗಾಣಿಕೆ ವಿರುದ್ದ ಸಚಿವ ಆರಗ ಜ್ಞಾನೇಂದ್ರ ಅವರೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here