ಸೊರಬ: ಆರಂಭದಲ್ಲಿ ಟ್ಯೂಷನ್ ಗೆ ಬಂದ ಪುಟಾಣಿಯನ್ನು ಬೆಳೆದು ದೊಡ್ಡವಳಾಗುತ್ತದ್ದಂತೆ ಗುರೂಜಿಯೇ ವಿವಾಹವಾಗಿರುವ ಘಟನೆ ಸೊರಬದಲ್ಲಿ ಜರುಗಿದ್ದು, ತಡವಾಗಿ ಬೆಳಕೆಗೆ ಬಂದಿದೆ.
ಸುಮಾರು 50 ವರ್ಷ ವಯಸ್ಸಿನ ಗುರೂಜಿ ಎಂದೇ ಬಿಂಬಿಸಲ್ಪಟ್ಟ ವ್ಯಕ್ತಿಯೋರ್ವ ತನ್ನ ಬಳಿ 5 ನೇ ತರಗತಿಯಿಂದ ಟ್ಯೂಷನ್ ಗೆ ಬರುತ್ತಿದ್ದ ಯುವತಿಯನ್ನೇ ವರಿಸಿರುವುದು ಶಿಕ್ಷಕ ಸಮಾಜ ಹಾಗೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.
ಪೋಷಕರು ನಂಬಿಕೆ ಮೇಲೆ ಮಕ್ಕಳು ಶಿಕ್ಷಿತರಾಗಲಿ, ಹೆಚ್ಚು ಹೆಚ್ಚು ಅಂಕ ಗಳಲಿಸಲಿ ಎಂದು ಕೆಲ ಅನಧಿಕೃತ ಪಾಠ ಶಾಲೆಗಳಲ್ಲಿ ಬಿಡುವುದು ಉಂಟು. ಅಂತ ಕುಟುಂಬದ ಆರ್ಥಿಕ ದೌರ್ಬಲ್ಯವನ್ನೇ ಟಾರ್ಗೆಟ್ ಮಾಡಿ, ಪಾಠ ಕಲಿಯಲು ಬಂದ ಬಾಲಕಿ, ಯುವತಿಯಾಗುತ್ತಿದ್ದಂತೆ ಗುರೂಜಿಯೊಬ್ಬ ವಿವಾಹವಾಗಿದ್ದಾನೆ. ಇದಕ್ಕೆ ಕೆಲ ರಿಯಲ್ ಎಸ್ಟೇಟ್ ಏಜೆಂಟರು, ಹೋರಾಟಗಾರರು ಸಹ ಸಾಥ್ ನೀಡಿದ್ದು ಇದೆ.
ಪೊಲೀಸ್ ಠಾಣೆಯಲ್ಲಿ ಯುವತಿಯು ವೃದ್ಧಾಪ್ಯದ ಸಮೀಪದಲ್ಲಿರುವ ವ್ಯಕ್ತಿಯೇ ಬೇಕು ಎಂದು ಹೇಳಿಕೆ ನೀಡಿರುವುದು ಹಾಗೂ ಯುವತಿಯು ವಯಸ್ಕಳಾಗಿರುವುದು ಸಹಜವಾಗಿಯೇ, ಯುವತಿಯ ಹೇಳಿಕೆಯೇ ಠಾಣೆಯಲ್ಲಿ ದಾಖಲಾಗಿದೆ. ಇನ್ನು ಆ ವೃದ್ಧಾಪ್ಯದ ಸಮೀಪದಲ್ಲಿರುವ ವ್ಯಕ್ತಿ ರಕ್ಷಣೆ ಕೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೆಲ ಮಾಧ್ಯಮದವರ ಸಹಕಾರ ಕೋರಿದ್ದ ಎನ್ನಲಾಗುತ್ತಿದೆ.
ಒಟ್ಟಾರೆ… ವೃದ್ದಾಪ್ಯದ ಹೊಸ್ತಿಲಲ್ಲಿರುವ ವ್ಯಕ್ತಿ, ಹಾಗೂ ಯುವತಿಯ ಹೇಳಿಕೆಗಳನ್ನಾದರಿಸಿ ಮತ್ತು ಅವರ ಕುಟುಂಬದವರ ಹೇಳಿಕೆಗಳನ್ನು ಆಧರಿಸಿ ಗುರೂಜಿ ಮತ್ತು ಶಿಷ್ಯೆಯ ವಿವಾಹ ರದ್ದಾಂತ ಸುಖಮಯವಾಗಿ ಮುಕ್ತಾಯವಾಗಿದೆ.