ಶಿಷ್ಯ ವೇತನವೆಂಬುದು ಗೌರವಾಯುತವಾಗಿ ನೀಡುವ ಹಣ ಇದನ್ನು ದುರುಪಯೋಗ ಪಡಿಸಿಕೊಳ್ಳಬೇಡಿ: ಪ್ರವೀಣ್

0
314

ಹೊಸನಗರ: ಸರ್ಕಾರ ಓದುವ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ವಿದ್ಯಾ ಧಾನಕ್ಕೆ ಸಹಾಯ ಹಸ್ತ ನೀಡುತ್ತಿದೆ ಅದರ ಜೊತೆಗೆ ಹಲವು ಸಂಘ-ಸಂಸ್ಥೆಗಳು ಬಡ ಮಕ್ಕಳು ವಿದ್ಯಾವಂತರಾಗ ಬೇಕೆಂಬ ಹಂಬಲದೊಂದಿಗೆ ವಿದ್ಯದಾನಕ್ಕಾಗಿಯೇ ಸಹಯ ಹಸ್ತ ನೀಡುತ್ತಿದೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸಹಯ ಹಸ್ತವನ್ನು ದುರುಪಯೋಗ ಪಡಿಸಿಕೊಳ್ಳದಂತೆ ವಿದ್ಯಾಬ್ಯಾಸವನ್ನು ಮುಂದುವರೆಸಿ ದೇಶದ ಸಂಪನ್ಮೂಲ ವ್ಯಕ್ತಿಯಾಗಿ ಬದುಕಿ ತೋರಿಸಬೇಕೆಂದು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರೊ ಪ್ರವೀಣ್ ಸಿ ಯವರು ಹೇಳಿದರು.

ಹೊಸನಗರದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿಯ ಆವರಣದಲ್ಲಿ ಸುಜ್ಞಾನನಿಧಿ ಶಿಷ್ಯ ವೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಶಿಷ್ಯವೇತನ ಪತ್ರವನ್ನು ವಿತರಿಸಿ ಮಾತನಾಡಿದರು.

ಈ ಸಂಸ್ಥೆಯ ಯೋಜನಾಧಿಕಾರಿ ಬೇಬಿಯವರು ಮಾತನಾಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ ಯೋಜನೆಯ ಪಾಲುದಾರ ಕುಟುಂಬದ ಸ್ವ-ಸಹಾಯ ಹಾಗೂ ಪ್ರಗತಿಬಂಧು ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗುವಂತೆ ಸುಜ್ಞಾನನಿಧಿ ಶಿಷ್ಯವೇತನವು ಜಾರಿಗೆ ಬಂದಿದ್ದು ಸುಜ್ಞಾನನಿಧಿ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ 2ರಿಂದ 5ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಸಂಸ್ಥೆಯು ನಿಗಧಿಪಡಿಸಿದ ಆಯ್ದ ಕೋರ್ಸಿಗೆ 400ರೂಪಾಯಿಯಿಂದ 1ಸಾವಿರ ಮೊತ್ತದ ಮಾಸಿಕ ಶಷ್ಯವೇತನ ನಮ್ಮ ಸಂಸ್ಥೆಯಿಂದ ನೀಡುತ್ತ ಬಂದಿದ್ದೇವೆ ಅದರಂತೆ ಈ ವರ್ಷವೂ 18ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ ಪಡೆದಿದ್ದು ಅವರೆಲ್ಲರಿಗೂ ಇಂದಿನಿಂದಲೇ ಚಾಲ್ತಿಗೆ ಬರುವಂತೆ ಮಂಜೂರಾತಿ ಪತ್ರ ನೀಡುತ್ತಿದ್ದೇವೆ ನಾವು ನೀಡುವ ಶಷ್ಯವೇತನವನ್ನು ದುರುಪಯೋಗ ಪಡಿಸಿಕೊಳ್ಳದೇ ವಿದ್ಯಾಭ್ಯಾಸಕ್ಕೆ ಮುಂದುವರೆಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಎನ್.ಆರ್.ದೇವಾನಂದ್, ಜಿಲ್ಲಾ ನಿರ್ದೆಶಕರಾದ ಚಂದ್ರಶೆಖರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಲಕ್ಷ್ಮಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here