23.2 C
Shimoga
Sunday, November 27, 2022

ಶೀಘ್ರದಲ್ಲಿ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲುಗಡೆ ; ಶಾಸಕ ಹರತಾಳು ಹಾಲಪ್ಪರಿಪ್ಪನ್‌ಪೇಟೆ: ಬಹು ನಿರೀಕ್ಷೆಯಂತೆ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಮೈಸೂರು-ತಾಳಗುಪ್ಪ ಇಂಟರ್ ಸಿಟಿ ಟ್ರೈನ್ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ನಾಲ್ಕೈದು ರೈಲುಗಳು ಶೀಘ್ರದಲ್ಲಿ ಅರಸಾಳಿನಲ್ಲಿ ನಿಲುಗಡೆಯಾಗಲಿವೆ ಎಂದು ಶಾಸಕ ಹರತಾಳು ಹಾಲಪ್ಪ ಘೋಷಿಸಿದರು.


ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಸಂಸದ ಬಿ.ವೈ.ರಾಘವೇಂದ್ರರವರು ಇಡೀ ದೇಶದಲ್ಲಿ ಅಭಿವೃದ್ದಿ ಕಾರ್ಯದಲ್ಲಿ ಸಂಸದರ ಪೈಕಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಹೊಂದಿದ್ದು, ಹೊಸನಗರ ತಾಲ್ಲೂಕಿನ ಏಕೈಕ ರೈಲ್ವೆ ನಿಲ್ದಾಣ ಮಾಲ್ಗುಡಿ (ಅರಸಾಳು) ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲುಗಡೆಗೆ ಅನುಕೂಲವಾಗಲೆದು ಕೋಟ್ಯಂತರ ಹಣ ವ್ಯಯ ಮಾಡಿ ಸುಸಜ್ಜಿತ ಪ್ಲಾಟ್‌ಫಾರಂ ನಿರ್ಮಾಣವಾಗಿದ್ದರೂ ಸಹ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗದೇ ಈ ಭಾಗದ ಪ್ರಯಾಣಿಕರು ಹರಸಾಹಸ ಪಡುವಂತಾಗಿತ್ತು.


ಈ ಬಗ್ಗೆ ಗೃಹಸಚಿವರಾದ ಆರಗ ಜ್ಞಾನೇಂದ್ರ ಹಾಗೂ ನಾನು ಸಂಸದ ಬಿ.ವೈ.ರಾಘವೇಂದ್ರರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಮಲೆನಾಡಿನ ಪ್ರದೇಶ ವ್ಯಾಪ್ತಿಯ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಿಂದ ಭಟ್ಕಳ, ಕುಂದಾಪುರ, ಬೈಂದೂರು, ಪವಿತ್ರ ಯಾತ್ರಾ ಸ್ಥಳವಾದ ಕೊಲ್ಲೂರು, ಕೊಡಚಾದ್ರಿ, ರಾಮಚಂದ್ರಪುರಮಠ, ಹೊಂಬುಜ ಮಠ, ನಾರಾಯಣಗುರು ಮಹಾಸಂಸ್ಥಾನಮಠ, ಮಳಲಿಮಠ, ನಗರಕೋಟೆ, ಕವಲೇದುರ್ಗ, ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ, ಗುಳಿಗುಳಿ ಶಂಕರ, ಅಲಸೆ ಚಂಡೀಕೇಶ್ವರಿ ದೇವಸ್ಥಾನ, ಅಲ್ದೂರು ದುರ್ಗಪರಮೇಶ್ವರಿ ಅಮ್ಮನವರ ದೇವಸ್ಥಾನ, ಕಂಕಳಿ ಗವಿಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳ ವೀಕ್ಷಣೆ ದೇಶದ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪ್ರವಾಸಿಗರು ಮತ್ತು ಉದ್ಯೋಗ ನಿಮಿತ್ತ ದೂರದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಇನ್ನಿತರ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಉದ್ಯೋಗ ಅರಸಿ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಸಂಚರಿಸುವರಿಗೆ ಹೆಚ್ಚಿನ ಅನುಕೂಲವಾಗುವುದೆಂಬ ಸದುದ್ದೇಶದಿಂದ ಶೀಘ್ರದಲ್ಲಿ ಅರಸಾಳು ರೈಲ್ವೆ (ಮಾಲ್ಗುಡಿ) ನಿಲ್ದಾಣದಲ್ಲಿ ತಾಳಗುಪ್ಪ ಮಾರ್ಗದ ಎಲ್ಲಾ ರೈಲುಗಳು ನಿಲುಗಡೆಯಾಗಲಿವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಸಿಸಿಬಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಳಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್.ದಿನೇಶ್‌ಗೌಡರು, ಜಿ.ಸ.ಬ್ಯಾಂಕ್ ನಿರ್ದೇಶಕ ಜಿ.ಎನ್.ಸುಧೀರ್ ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!