ಶೃಂಗೇರಿ : ಮಲೆನಾಡ ಭಾಗದಲ್ಲಿ ಎದುರಾಗಿರುವ ಗಂಭೀರ ಸಮಸ್ಯೆಗಳ ಚಿಂತನ – ಮಂಥನದ ಹಿನ್ನೆಲೆಯಲ್ಲಿ ಮೇ ಒಂದರಂದು ಮಲೆನಾಡ ಪ್ರಾಂತ್ಯ ಪ್ರಥಮ ಸಮ್ಮೇಳನ ನಡೆಯಲಿದೆ.
ಚಿಕ್ಕಮಗಳೂರು – ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡಂತೆ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜರಗಲಿದೆಸ
ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಗೋಮಾಳವನ್ನು ಖಾಸಗಿಯವರಿಗೆ ವಹಿಸಿಕೊಡುವ ಹುನ್ನಾರ, ಜಮೀನು ಮತ್ತು ಸಾಗುವಳಿ ಚೀಟಿ ನೀಡಲು ಆಗುತ್ತಿರುವ ವಿಳಂಬ ಸೇರಿದಂತೆ ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ.
“ಮಲೆನಾಡನ್ನು ಉಳಿಸಲು ಗೋಪಾಲಗೌಡರ ಸಮಾಜವಾದಿ ನೆಲೆಯಾಗಿಸಲು” ಸಂಕಲ್ಪ ತಳೆಯುವ ಘೋಷವಾಕ್ಯದಡಿ ಸಮ್ಮೇಳನವನ್ನು ಜನಶಕ್ತಿ ಸಂಘಟನೆ ಆಯೋಜಿಸಿದೆ.
ನಾಡಿನ ಅನೇಕ ಪ್ರಗತಿಪರರು, ಚಿಂತಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
Related