Home Sringeri ಶೃಂಗೇರಿಯ ಮೂರು ಕಡೆ ಸರಣಿ ಕಳ್ಳತನ ; ಪರಾರಿಯಾಗುತ್ತಿದ್ದ ಕಳ್ಳ ಲಾಕ್ !
ಶೃಂಗೇರಿ: ತಾಲ್ಲೂಕಿನಲ್ಲಿ ಎರಡು ಕಡೆ ಕಳ್ಳತನ ನಡೆದಿದ್ದು, ಮತ್ತೊಂದು ಕಡೆ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ.
ನೆಮ್ಮಾರಿನ ರತ್ನಾಕರ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಮನೆಯ ಬೀಗವನ್ನು ತೆರೆದು ಗಾಡ್ರೇಜ್ ನಲ್ಲಿರಿಸಿದ್ದ ಹಣ ಹಾಗೂ ಚಿನ್ನದ ಕಿವಿಯೋಲೆಯನ್ನು ಕದಿದ್ದು. ಮನೆಯಲ್ಲಿನ ಎಲ್ಲರು ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿರುವ ಕಳ್ಳರು ಹಣ ಹಾಗೂ ಬಂಗಾರವನ್ನು ಎಗರಿಸಿದ್ದಾರೆ.
ಮರಳಿ ಮನೆಗೆ ಬಂದು ನೋಡಿದಾಗ ಬಾಗಿಲ ಬೀಗ ತೆರೆದಿರುವುದು ಕಂಡುಬಂದಿದೆ. ಒಳಪ್ರವೇಶಿಸಿ ನೋಡಿದಾಗ ಮನೆಯ ಗಾಡ್ರೇಜ್ ನ್ನು ತೆರೆದು ಸಂಪೂರ್ಣವಾಗಿ ಮನೆಯನ್ನು ಹುಡುಕಿ ಮನೆಯಲ್ಲಿರಿಸಿದ್ದ 60 ಸಾವಿರ ನಗದು ಹಾಗೂ ಬಂಗಾರದ ಕಿವಿಯೋಲೆಯನ್ನು ಕಳ್ಳರು ಕದ್ದಿದ್ದಾರೆಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಹೊರವಲಯದಲ್ಲಿನ ಮೆಣಸೆ ಗ್ರಾಮದಲ್ಲಿಯೂ ಕಳ್ಳರು ಕೈಚಳಕ ತೋರಿದ್ದು ಬೇಲಿ ಹಾಕಲೆಂದು ತೆಗೆದಿಟ್ಟಿದ್ದ ತಂತಿಯ ಬಂಡಲ್ ನ್ನು ಕದ್ದಿದ್ದಾರೆ. ಈ ಮಧ್ಯೆ ಶೃಂಗೇರಿ ಪಟ್ಟಣದಲ್ಲಿರುವ ಕನ್ಯಾಕುಮಾರಿ ಲಾಡ್ಜ್ ನಲ್ಲಿ ಕಳ್ಳತನ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಓರ್ವ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶೃಂಗೇರಿ ಪಟ್ಟಣದಲ್ಲಿರುವ ಕನ್ಯಾಕುಮಾರಿ ಲಾಡ್ಜ್ ನಲ್ಲಿದ್ದವರ ಬ್ಯಾಗ್ ಒಂದನ್ನು ಕಳ್ಳತನ ಮಾಡಿ ಮಂಗಳೂರು ಬಸ್ಸಿನಲ್ಲಿ ಬೇರೆಡೆಗೆ ಪ್ರಯಾಣ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ ವ್ಯಾನಿಟಿ ಬ್ಯಾಗ್ ನ್ನು ವಶಕ್ಕೆ ಪಡೆದ ಪೊಲೀಸರು ಸಂಬಂಧ ಪಟ್ಟವರಿಗೆ ಮರಳಿ ನೀಡಿದ್ದಾರೆ.
Related