ಶೆಡ್‌ನೊಳಗಿದ್ದ ಮೇಕೆ ಮರಿಯನ್ನು ನುಂಗಿ ಅಲ್ಲೆ ಗಡದ್ದಾಗಿ ನಿದ್ದೆಗೆ ಜಾರಿದ ಹೆಬ್ಬಾವು ಸೆರೆ !

0
670

ಚಿಕ್ಕಮಗಳೂರು: ಶೆಡ್‌ನೊಳಗಿದ್ದ ಮೇಕೆ ಮರಿಯನ್ನು ನುಂಗಿ ಅಲ್ಲೆ ಮಲಗಿ ಅಚ್ಚರಿ ಮೂಡಿಸಿದೆ.

ನಗರದ ಕಾಫಿ ಮಂಡಳಿ ಸಮೀಪ ಸುಮಾರು 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಮೇಕೆ ಮರಿಯನ್ನು ನುಂಗಿರುವ ಘಟನೆ ನಡೆದಿದೆ.

ಕಾಫಿ ಮಂಡಳಿ ಸಮೀಪದ ಮೇಕೆ ಶೆಡ್‌ಗೆ ನುಗ್ಗಿ ಮೇಕೆ ಮರಿ ನುಂಗಿದ ಸುಮಾರು 12 ಅಡಿ ಉದ್ದದ್ದ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಗುರುವಾರ ಬೆಳಿಗ್ಗೆ ನಗರದ ಕಾಫಿ ಮಂಡಳಿ ಸಮೀಪದ ವೆಂಕಟಪ್ಪ ಎಂಬುವರ ಶೆಡ್‌ಗೆ ಕಳ್ಳನಂತೆ ನುಗ್ಗಿದ ಹೆಬ್ಬಾವು ಮಾಲೀಕನ ಎದುರೇ ಮೇಕೆ ಮರಿಯನ್ನು ನುಂಗಿ ಹಾಕಿದೆ. ಇದನ್ನು ಕಂಡು ಮಾಲೀಕ ಗಾಬರಿಗೊಂಡು ಕೂಗಾಡಿದರೂ ಅಲ್ಲಿಂದ ಕದಲದ ಹೆಬ್ಬಾವು ಅದೇ ಶೆಡ್ ಕೋಣೆಯೊಳಗೆ ನುಗ್ಗಿ ಗಡದ್ದಾಗಿ ನಿದ್ದೆಗೆ ಜಾರಿದೆ.

ಗಾಬರಿಗೊಂಡ ಮಾಲೀಕ ಸ್ಥಳೀಯರ ಸಹಕಾರದಿಂದ ಸ್ಥಳೀಯ ಉರಗ ತಜ್ಞ ಸ್ನೇಕ್ ನರೇಶ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ರು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಜಾಕಚಕ್ಯತೆಯಿಂದ ಸಣ್ಣ ಕೊಣೆಯೊಳಗಿದ್ದ ಹೆಬ್ಬಾವನ್ನು ಹರಸಾಹಸ ಪಟ್ಟು ಹಿಡಿದರು.

ಮೇಕೆ ಮರಿಯನ್ನು ನುಂಗಿದ ಹೆಬ್ಬಾವನ್ನು ನೋಡಿ ಸ್ಥಳೀಯರು ಆಶ್ಚರ್ಯ ಚಕಿತರಾದ್ರು. ಬಳಿಕ ಹಾವನ್ನು ಸುರಕ್ಷಿತವಾಗಿ ಸ್ಥಳೀಯ ಚುರ್ಚೆ ಗುಡ್ಡ ಅರಣ್ಯಕ್ಕೆ ಬಿಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here