24.3 C
Shimoga
Friday, December 9, 2022

ಶೇಡ್ಗಾರ್ ಗ್ರಾಪಂ ಸದಸ್ಯನ ದರ್ಪ ; ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ !

ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯ ತುಂಬ್ರಮನೆ ಗ್ರಾಮದ ಶಿರೂರು ಎಂಬಲ್ಲಿ ನೀರಿನ ವಿಚಾರಕ್ಕೆ ಗ್ರಾಮಸ್ಥನೋರ್ವನ ಮೇಲೆ ಗ್ರಾಮಪಂಚಾಯಿತಿ ಸದಸ್ಯ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಗ್ರಾಮದ ಚೇತನ್ ಎಂಬುವರು ತಮ್ಮ ಮನೆಗೆ ಕುಡಿಯುವ ನೀರು ಬರದಿದ್ದ ಕಾರಣ ಗ್ರಾಮಪಂಚಾಯಿತಿ ಸದಸ್ಯ ಪಣಿರಾಜ್ ಎಂಬುವವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ನಂತರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದ ಕಾರಣ ಬೇಕಾದರೆ ಎಂಎಲ್ಎ ಹತ್ತಿರ ಹೋಗು ಎಂದು ಪಣಿರಾಜ್ ಧಮ್ಕಿ ಹಾಕಿದ್ದಾನೆ. ಈ ವಿಷಯವನ್ನು ಚೇತನ್ ಬೇರೆಯವರ ಬಳಿ ತಿಳಿಸಿದ ಕಾರಣ ಏಕಾಏಕಿ ಚೇತನ್ ಮನೆಗೆ ನುಗ್ಗಿದ ಪಣಿರಾಜ್ ಚೇತನ್ ಮೇಲೆ ಹಲ್ಲೆ ನಡೆಸಿದ್ದಾನೆ. ತಪ್ಪಿಸಲು ಬಂದ ಚೇತನ್ ಪತ್ನಿಯ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಹಲ್ಲೆಗೊಳಗಾದ ಚೇತನ್ ಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಅಕ್ಷಯ್ ಕುಮಾರ್

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!