ಶ್ರದ್ಧೆ ಭಕ್ತಿಯ ಪೂಜೆಗೆ ಖಂಡಿತಾ ಫಲವಿದೆ ; ರಾಘವೇಶ್ವರ ಭಾರತೀ ಶ್ರೀ

0
262

ಹೊಸನಗರ : ಭಕ್ತಿ ಭಾವದ ಭಜನೆಯಾಗಲಿ, ಭಕ್ತಿ ಶ್ರದ್ದೆಯ ಪೂಜೆಯಾಗಲಿ ಅದಕ್ಕೆ ಫಲ ಖಂಡಿತಾ ದೊರೆಯಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಹೊಸನಗರ ಶ್ರೀಮಠದಲ್ಲಿ ನಡೆಯುತ್ತಿರುವ ರಾಮೋತ್ಸವದಲ್ಲಿ ನಡೆದ ಪೂಗ ಪೂಜೆಯ ನಂತರ (ಅಡಿಕೆ ರಾಶಿ) ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮಠದ ಶಿಷ್ಯ ಭಕ್ತರು ತಮ್ಮ ಮನೆಗಳಲ್ಲಿ ಬೆಳೆದ ಅಡಕೆಯೂ ಸೇರಿದಂತೆ ಬೆಳೆಯನ್ನು ಶ್ರೀಮಠಕ್ಕೆ ಸಮರ್ಪಿಸುವ ಕ್ರಮ ಈ ಹಿಂದಿನಿಂದಲೂ ನಡೆದು ಬಂದಿದೆ. ಶ್ರೀಮಠದ ಶಿಷ್ಯ ಭಕ್ತರಿಂದ ಮಠಕ್ಕೆ ಸಮರ್ಪಿತವಾಗಿರುವ ಬೆಳೆಯನ್ನು ಸಮಷ್ಠಿ ಸಮಾಜ ಒಟ್ಟಾಗಿ ಪೂಜಿಸುವ ಕ್ರಮದಿಂದ ಎಲ್ಲರಿಗೂ ಒಳಿತಾಗಲಿದೆ. ಇದು ಸಿರಿದೇವಿಯ ಪೂಜೆ. ಇಲ್ಲಿ ಕೇಳಿ ಕೊಳ್ಳುವುದು ಸಫಲತೆ, ಸಂಪತ್ತು ಸಮೃದ್ದಿ ಮತ್ತು ಸಮೃದ್ಧಿ, ಸಫಲತೆ ಎನ್ನುವುದು ಉತ್ತಮ ಬೆಳೆಯಾಗಲಿ ಎನ್ನುವುದು ಹಾಗೂ ಸಂಪತ್ತು ಸಮೃದ್ಧಿ ಎಂದರೆ ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎನ್ನುವುದು ಹಾಗೂ ಕೈ ಬಂದ ಹಣ ಅದು ಲಕ್ಷ್ಮಿ ಅದೂ ಕೂಡ ಒಳ್ಳೆಯ ಕಾರ‍್ಯಕ್ಕೆ ವಿನಿಯೋಗಿಸುವ ಮನೋಭಾವ ಬರಬೇಕು. ಹೀಗೆ ಈ ರಾಶಿ ಪೂಜೆಯ ಹಿಂದಿರುವ ಭಾವ ಎಂದ ಅವರು, ಈ 21ನೇ ಶತಮಾನದಲ್ಲಿಯೂ ಇಂತಹ ಕ್ರಮ ಸರಿಯ ಎನ್ನುವುದಕ್ಕೆ ಒಳಿತಾದ ಉದಾಹರಣೆಗಳು ನಮ್ಮೆಲ್ಲರ ಮುಂದಿರುವುದೇ ಸಾಕ್ಷಿ ಎಂದರು.

ರಾಮಚಂದ್ರಾಪುರಮಠದ ರಾಮೋತ್ಸವದ ವಿಶೇಷತೆಯಲ್ಲಿ ಸೀತೋತ್ಸವ, ರಾಮೋತ್ಸವ ಹಾಗೂ ಆಂಜನೇಯೋತ್ಸವ ಪ್ರಮುಖವಾದದ್ದು. ಇಂದು ಸೀತೋತ್ಸವ, ಸೀತೆಯೇ ಸಿರಿದೇವಿ, ಇಡೀ ರೈತರ ಪಾಲಿಗೆ ಒಳ್ಳೆಯದನ್ನು ಮಾಡುವ ಮಹಾಶಕ್ತಿ. ಆಕೆ ನೇಗಿಲ ಗೆರೆಯಲ್ಲಿ ಎದ್ದು ಬಂದವಳು, ಹಾಗಾಗಿಯೇ ರೈತರ ಪಾಲಿಗೆ ವರವಾಗುವಳು, ಈ ಹಿನ್ನೆಲೆಯಲ್ಲಿಯೇ ಸೀತೋತ್ಸವದ ಈ ದಿನ ಮಠದಲ್ಲಿ ಬೆಳೆ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಶ್ರೀಗಳವರ ಅಮೃತ ಹಸ್ತದಿಂದ ಅಡಿಕೆ ರಾಶಿ ಪೂಜೆ ನೆರವೇರಿಸಲ್ಪಟ್ಟಿತು. ಅಖಂಡ ಭಜನೆ, ರಾಮತಾರಕ ಹವನ ಮತ್ತಿತರ ಕಾರ‍್ಯಕ್ರಮಗಳು ಜರುಗಿದವು. ಶಿವಮೊಗ್ಗ ಶಿಮೂಲ್ ಅಧ್ಯಕ್ಷ ನಿಸರಾಣಿ ಶ್ರೀಪಾದ ಹೆಗಡೆ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here