ಶ್ರೀಕರಗೌಡ ಕೊಳಿಗೆಯವರಿಗೆ ಡಾಕ್ಟರೇಟ್ ಪದವಿ

0
345

ತೀರ್ಥಹಳ್ಳಿ: ನರೇಂದ್ರ ಮೋದಿ ವಿಕಾಸ ಮಿಷನ್ ರಾಜ್ಯ ಉಪಾಧ್ಯಕ್ಷ, ತೀರ್ಥಹಳ್ಳಿ ಮೂಲದ ಯುವ ಉದ್ಯಮಿ ಶ್ರೀಕರಗೌಡ ಕೊಳಿಗೆ ಅವರು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಭಾರತ್ ವರ್ಚ್ರ್ಯುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವಿವಿ ಮಾ.22ರ ಘಟಿಕೋತ್ಸವದಲ್ಲಿ ಶ್ರೀಕರ ಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಉನ್ನತ ಶಿಕ್ಷಣ, ನವೋದ್ಯಮ, ಸಂಘಟನೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶ್ರೀಕರಗೌಡ ಅವರು ಇತ್ತೀಚೆಗೆ ಭಾರತ ಸರಕಾರದ ರೈಲ್ವೆ ಇಲಾಖೆಯ ಆಗ್ನೇಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯರಾಗಿ ಕೇಂದ್ರ ಸರಕಾರದಿಂದ ನೇಮಕಗೊಂಡಿದ್ದರು.

ಗ್ರಾಮೀಣ ಉದ್ಯೋಗ ಸೃಷ್ಟಿ, ಮಹಿಳಾ ಸ್ವಾವಲಂಬನೆ, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಅವರು ಅಧ್ಯಯನ ಮಾಡುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here