ಶ್ರೀಗಂಧದ ಕಳ್ಳತನದ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ

0
184

ಚಿಕ್ಕಮಗಳೂರು: ಶ್ರೀಗಂಧದ ಗುಡಿ ಎಂದು ಖ್ಯಾತಿ ಪಡೆದಿರುವ ನಾಡಿನಲ್ಲಿ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಸರ್ವನಾಶದ ಅಂಚಿನಲ್ಲಿದ್ದು ಕಳ್ಳತನಕ್ಕೆ ಮುಖ್ಯ ಕಾರಣವಾಗಿರುವ ಹಾಗೂ ಶ್ರೀಗಂಧದ ಅವ್ಯವಹಾರದಲ್ಲಿ ತೊಡಗಿದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಡಾ|| ಕೆ. ಸುಂದರಗೌಡ ಕಳೆದ ವಾರ ಅಂಧಮಕ್ಕಳ ಶಾಲೆಯ ಪಾರ್ಕ್‍ನಿಂದ ರಾಜಾರೋಷವಾಗಿ ಶ್ರೀಗಂಧವನ್ನು ತುಂಡರಿಸಿದ್ದಾರೆ. ಈ ಬಗ್ಗೆ ಅವ್ಯವಹಾರದಲ್ಲಿ ತೊಡಗಿದವರಿಗೆ ಯಾವುದೇ ರೀತಿಯಲ್ಲಿ ಶಿಕ್ಷೆಯಾಗದಿರುವುದು ಶ್ರೀಗಂಧದ ನಾಶಕ್ಕೆ ಮೂಲ ಕಾರಣವಾಗಿದೆ ಎಂದರು.

ಲಂಗು ಲಗಾಮಿಲ್ಲದೇ ಕಳ್ಳತನವಾಗುತ್ತಿರುವ ಶ್ರೀಗಂಧ ರಕ್ಷಣೆಗೆ ಪೊಲೀಸ್ ಇಲಾಖೆಯ ಶ್ವಾನದಳವನ್ನು ಬಳಸುವ ಮುಖಾಂತರ ಕಳ್ಳರನ್ನು ಪತ್ತೆಹಚ್ಚಿ ಕಾನೂನಿನಡಿಯಲ್ಲಿ ಆ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿದಲ್ಲಿ ಮಾತ್ರ ಶ್ರೀಗಂಧದವು ಪ್ರಕೃತಿಯಲ್ಲಿ ರೈತರ ಸಂಪತ್ತಾಗಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶ್ರೀಗಂಧದ ಕಳ್ಳನನ್ನು ಬಂಧಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಲ್ಲಿ ಯಾರ ಜಮೀನುಗಳಲ್ಲಿ ಕಳ್ಳತನವಾಗಿರುತ್ತದೆಯೇ ಆ ರೈತರಿಗೆ ಅದರಿಂದ ಪರಿಹಾರ ದೊರಕಿಸಿಕೊಡಬೇಕು. ಕಾನೂನಿನಡಿಯಲ್ಲಿ ತಿದ್ದುಪಡಿ ಮುಖಾಂತರ ಶ್ರೀಗಂಧದ ರಕ್ಷಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸಿ. ಆರ್. ರಘು, ಸದಸ್ಯ ಹುಲಿಕೆರೆ ಪುಲೀಕೇಶಿ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here