ಹೊಸನಗರ: ತಾಲ್ಲೂಕಿನ ಮುತ್ತೂರು ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ 50 ಸಾವಿರ ರೂ. ಡಿಡಿಯನ್ನು ಶಿವಮೊಗ್ಗ ಜಿಲ್ಲಾ ನಿರ್ದೆಶಕರಾದ ಚಂದ್ರಶೇಖರ್ ಮತ್ತು ತಾಲ್ಲೂಕು ಯೋಜನಾಧಿಕಾರಿ ಬೇಬಿ.ಕೆಯವರು ಗ್ರಾಮ ಪಂಚಾಯಿತಿ ಸದಸ್ಯರಾದ ಕರುಣಾಕರ ಹಾಗೂ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ರಮೇಶ್ ಗೌಡ ಕಾರ್ಯದರ್ಶಿ ನವೀನ್ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಮುಂಬಾರು ಉಮೆಶ್, ಹುಂಚರೋಡ್ ಹರೀಶ್, ರಾಮಚಂದ್ರ, ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಪದ್ಮನಾಭ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Related