ಶ್ರೀಧರ್ಮಸ್ಥಳ ಯೋಜನಾಧಿಕಾರಿಗಳಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವ್ಹೀಲ್‌ಚೇರ್ ವಿತರಣೆ

0
248

ಹೊಸನಗರ: ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮದರ್ಶಿಯವರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಬಾಹುಬಲಿ ಮಹಾಮಸ್ತಕಾಭಿಷೇಕದ ಸುಸುಂಧರ್ಭದಲ್ಲಿ ಕಡುಬಡತನದಿಂದ ಜೀವನ ನಡೆಸುತ್ತಿರುವ ವೃದ್ಧರಿಗೆ ಅನಾರೋಗ್ಯ ಪೀಡಿತರಿಗೆ ಉಪಯುಕ್ತವಾಗುವ ಸಲಕರಣೆಗಳಿಗೆ ಹಣದ ಸಹಾಯವನ್ನು ನೀಡುವುದಾಗಿ ಹೇಳಿದ್ದು ಇದಕ್ಕಾಗಿ ಜನಮಂಗಳ ಕಾರ್ಯಕ್ರಮ ಜಾರಿಗೆ ತಂದಿದ್ದು ಅದರಂತೆ 2020ರ ಕಾರ್ಯಕ್ರಮದಲ್ಲಿ ಅನಿಷ್ಠಾನಗೊಂಡಿದ್ದು ಇಡೀ ರಾಜ್ಯದಲ್ಲಿ ಜನಮಂಗಳ ಕಾರ್ಯಕ್ರಮದ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ರಿಪ್ಪನ್‌ಪೇಟೆ ಬಳಿಯ ಬಾಳೂರು ಗ್ರಾಮದ ವಾಸಿ ಶಶಿಕಲಾ ಅವರು ಕಳೆದ ವರ್ಷ ಬಾವಿಗೆ ಬಿದ್ದು ಎರಡು ಕಾಲಗಳನ್ನು ಕಳೆದುಕೊಂಡಿದ್ದು ಅವರ ಪತಿ ಮರಣ ಹೊಂದಿದ್ದು ಅವರಿಗೆ ಚಿಕ್ಕ ಮಗ ಮತ್ತು ಮಗಳಿದ್ದು ಅವರು ಅರ್ಥಿಕವಾಗಿ ಕುಂಠಿತ ಕುಟುಂಬವಾಗಿದ್ದು ಇದನ್ನು ಗಮನಿಸಿದ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಬೇಬಿ ಕೆಯವರು ಅವರು ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಸಾವಿರ ಮಾಸಾಶನ ಹಾಗೂ ಅವರ ಮನೆಗೆ ತೆರಳಿ ಧರ್ಮಸ್ಥಳ ಯೋಜನೆಯ ವತಿಯಿಂದ ಒಂದು ವ್ಹೀಲ್ ಚೇರ್‌ನ್ನು ಹೊಸನಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೇಬಿ ಕೆಯವರು ವಿತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಹರೀಶ ಸ್ಥಳೀಯ ಸೇವ ಪ್ರತಿನಿಧಿಗಳು ಊರಿನವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here