ಶ್ರೀಮಂತರ ಪರವಾದ ಕಾಯ್ದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿದೆ: ಮಾಜಿ ಸಚಿವ ಕಿಮ್ಮನೆ ರತ್ನಾಕರ್

0
225

ತೀರ್ಥಹಳ್ಳಿ : ಸಂಯುಕ್ತ ಕಿಸಾನ್ ಮಂಚ್ ಕರೆದಿರುವ ಭಾರತ್ ಬಂದ್‌ಗೆ ತೀರ್ಥಹಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದೆ. ತೀರ್ಥಹಳ್ಳಿಯಲ್ಲಿ ಅಂಗಡಿ ಮುಂಗಟ್ಟು ಸೇರಿದಂತೆ ಬಸ್ಸು ಆಟೋಗಳು ಸಹ ಓಡಾಡುತ್ತಿರುವುದು ಕಂಡು ಬಂತು.

ಇನ್ನು ತೀರ್ಥಹಳ್ಳಿಯ ಮಾಧವ ಮಂಗಲ ಸಭಾಭವನದ ಪಕ್ಕದಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತೀರ್ಥಹಳ್ಳಿ ತಾಲೂಕು ಇವರ ವತಿಯಿಂದ ರೈತ ಹಾಗೂ ಜನ ವಿರೋಧಿ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ವಿಚಾರಗೋಷ್ಠಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, 1980 ರಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿಂದಲೂ ನಾನು ರೈತರ ಜೊತೆಯಲ್ಲಿಯೇ ಇದ್ದೇನೆ. 62 – 65% ಜನರಿಗೆ ತೊಂದರೆಯಾಗುವ ಈ ಕಾಯ್ದೆಯನ್ನು ಯಾರ ಜೊತೆಗೂ ಚರ್ಚಿಸದೆ ತಂದಿದ್ದಾರೆ. ಒಂದು ವೇಳೆ ಈ ವಿಚಾರಕ್ಕೆ ಪ್ರತಿಭಟನೆ ನೆಡೆದರು 2% ಜನರು ಮಾತ್ರ ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿದೆ. ಯಾವುದೇ ವಿಚಾರವಾದರೂ ಅಷ್ಟೇ ನಿರುದ್ಯೋಗ ಆದರೂ ಪ್ರತಿಭಟನೆ ಮಾಡುತ್ತಾರೆ ಅಲ್ಲಿಗೆ ಬಿಡುತ್ತಾರೆ. ಈ ಎಲ್ಲಾ ಕಾರಣಕ್ಕೆ ಕೇಂದ್ರ ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಇನ್ನು ಶ್ರೀಮಂತರ ಪರವಾದ ಕಾಯ್ದೆಯನ್ನು ಕೇಂದ್ರ ಸರ್ಕಾರ ತಂದಿದ್ದಾರೆ. ಅವರಿಗೆ ಬಡವರು, ರೈತರು ಕಣ್ಣಿಗೆ ಕಾಣಿಸುತ್ತಿಲ್ಲ. ನಾವು ಕೃಷಿ ಕಾಯ್ದೆಯನ್ನು ತಿರಸ್ಕರಿಸಬೇಕು. ಹಾಗಾಗಿ ಈ ಹೋರಾಟ ನೆಡೆಯಬೇಕು ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ನೆಂಪೆ ದೇವರಾಜ್ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ತೀರ್ಥಹಳ್ಳಿಯಲ್ಲಿ ಇಂದು ಒತ್ತಾಯವಾಗಿ ಬಂದ್ ಮಾಡಿಲ್ಲ ಕಾರಣ ಕೊರೊನಾದಿಂದಾಗಿ ವರ್ತಕರು ಈಗಾಗಲೇ ತೊಂದರೆಗೊಂಡಿದ್ದಾರೆ. ಆ ಕಾರಣಕ್ಕೆ ತೀರ್ಥಹಳ್ಳಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿಲ್ಲ. ಒಂದು ರೀತಿಯಲ್ಲಿ ತೀರ್ಥಹಳ್ಳಿಯ ವರ್ತಕರು ರೈತರು ಸಹ ಹೌದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಕೂಡ್ಲು ವೆಂಕಟೇಶ್, ಕಾರ್ಯದರ್ಶಿ ಹೊರಬೈಲ್ ರಾಮಚಂದ್ರ, ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಹಸಿರು ಸೇನೆ ಮುಖ್ಯಸ್ಥರಾದ ನಿಶ್ಚಲ್ ಜಾದೂಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here