ಶ್ರೀಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಾ.29 ರಂದು 17ನೇ ವರ್ಷದ ವರ್ಧಂತ್ಯೋತ್ಸವ

0
250

ಹೊಸನಗರ: ಮಾರಿಗುಡ್ಡದಲ್ಲಿರುವ ಶ್ರೀಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಾರ್ಚ್ 29ನೇ ಮಂಗಳವಾರ 17ನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣರವರು ತಿಳಿಸಿದ್ದಾರೆ.

ವರ್ಧಂತ್ಯೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಗಣೇಶ ಪೂಜೆ, ಸ್ವಸ್ತಿ ಪುಣ್ಯಹ ವಾಚನ,ಪ್ರದಾನ ಸಂಕಲ್ಪ, ನವಕ ಪ್ರದಾನ ಸ್ನಪನಾಧಿವಾಸ ಪ್ರದಾನ ಹೋಮ, ಕಲಶಾಭಿಷೇಕ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದ್ದು ಮಹ್ಯಾಹ್ನ 12;30ರಿಂದ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ರಾತ್ರಿ 9;30ಕ್ಕೆ ಕಾರಣಗಿರಿ ಯಕ್ಷಗಾನ ತಂಡದವರಿಂದ ಕೊಲ್ಲೂರು ಮಹಾತ್ಮೆ ಯಕ್ಷಗಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು, ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನರಾದ ನಾಗರಾಜ್, ಕಾರ್ಯದರ್ಶಿಯಾದ ಸುನೀಲ್‌ಕುಮಾರ್ ಟಿ, ಖಾಜಾಂಚಿ ಮನೋಹರ್ ಪಿ, ಸದಸ್ಯರಾದ ಗಿರೀಶ್, ಗೋಪಾಲ್, ನಾರಾಯಣ್, ನಿತ್ಯಾನಂದ, ಮಲ್ಲಿಕಾರ್ಜುನ, ದತ್ತಾತ್ರೇಯ ಉಡುಪ, ಹೆಚ್.ಎಲ್.ದತ್ತಾತ್ರೇಯ, ಅನಿಲ್‌ಕುಮಾರ್, ಪ್ರಕಾಶ್, ಟಿ.ವಿಜಯನಂದ, ಕುಮಾರಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here