ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಲಿಂಗೈಕ್ಯ ಶ್ರೀಗಳ ಗದ್ದುಗೆ ಮತ್ತು ಶಿಖರ ಕಲಶ ಸ್ಥಾಪನೆ ಧರ್ಮಜಾಗೃತಿ ಪೂರ್ವಭಾವಿ ಸಭೆ

0
421

ರಿಪ್ಪನ್‌ಪೇಟೆ: ಮೇ 16 ರಿಂದ 18 ರವರಗೆ ಕೋಣಂದೂರು ಬೃಹನ್ಮಠದಲ್ಲಿ ಲಿಂಗೈಕ್ಯರಾದ ಶ್ರೀಗಳವರ ಗದ್ದುಗೆ ಮತ್ತು ಶಿಖರ ಕಳಸ ಸ್ಥಾಪನೆ ಹಾಗೂ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಧರ್ಮಜಾಗೃತಿ ಸಮಾರಂಭದ ಪೂರ್ವಭಾವಿ ಸಭೆಯು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ಮೇ. 16 ರಂದು ಶಿಲಾ ಗದ್ದುಗೆ ಉದ್ಘಾಟನೆ ಮತ್ತು 17 ರಂದು ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ 18 ರಂದು ಧರ್ಮಜಾಗೃತಿ ಸಮಾರಂಭವನ್ನು ಆಯೋಜಿಸಲಾಗಿದೆ ಈ ಬಗ್ಗೆ ಕಾರ್ಯಕ್ರಮದ ರೂಪರೇಷದ ಕುರಿತು ಸಮಾಜ ಭಾಂದವರೊಂದಿಗೆ ಸಮಾಲೋಚನಾ ಸಭೆಯನ್ನು ಕರೆಯಲಾಗಿ ತಮ್ಮ ಸಲಹೆ ಸಹಕಾರದ ಚರ್ಚೆಗಳು ನಡೆಸಲಾಯಿತು.

ಶ್ರೀಗಳು ಪ್ರಾಸ್ತಾವಿಕದಲ್ಲಿ ಶ್ರೀಶೈಲ ಜಗದ್ಗುರುಗಳ ಇಚ್ಚೆಯಂತೆ ಮೇ. 16 ರಂದು ಬೃಹನ್ಮಠದಲ್ಲಿ ಸಾರ್ವಜನಿಕ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಹಾಗೂ 17 ರಂದು ಉಜ್ಜಯನಿ ಜಗದ್ಗುರು ದಿವ್ಯಸಾನಿಧ್ಯದಲ್ಲಿ ಧರ್ಮಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಧರ್ಮಜಾಗೃತಿ ಸಭೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನಿತರ ರಾಜಕೀಯ ಮುಖಂಡರು ಮತ್ತು ರಾಜ್ಯದ ವಿವಿಧ ಮಠಗಳ ಹರಗುರು ಚರಮೂರ್ತಿಗಳು ಭಾಗವಹಿಸುವರು ಅ ಬಗ್ಗೆ ಈಗಾಗಲೇ ದೇಶವ್ಯಾಪ್ತಿ ಕೊರೊನಾ ಮಹಾಮಾರಿ ಹೆಚ್ಚಳವಾಗುತ್ತಿದ್ದು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಸೇರಿದಂತೆ ಇಷ್ಟಲಿಂಗ ಮಹಾಪೂಜೆ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮದ ಖರ್ಚು ವೆಚ್ಚದ ಕುರಿತು ಸಂಗ್ರಹವನ್ನು ಹೇಗೆ ಯಾವು ರೀತಿಯಲ್ಲಿ ಮಾಡಬೇಕು ಎಂಬುದರ ಕುರಿತು ಸಮಾಜಭಾಂದವರ ಸಲಹೆ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ದೇಶದಿಂದಾಗಿ ಸಮಿತಿಯನ್ನು ರಚಿಸುವ ಮೂಲಕ ಮಠದ ಗುರುಗಳನ್ನು ಗೌರವಾಧ್ಯಕ್ಷರಾಗಿ ಹಾಗೂ ಉದ್ಯಮಿ ಕೆ.ಆರ್.ಪ್ರಕಾಶ್ ಇವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.

ಉಳಿದಂತೆ ವಿವಿಧ ತಾಲ್ಲೂಕ್‌ಗಳ ಸಮಾಜದ ಹಿರಿಯರನ್ನು ಅಧ್ಯಕ್ಷರನ್ನಾಗಿ ಮತ್ತು ತಮ್ಮ ವ್ಯಾಪ್ತಿಯಲ್ಲಿ ಬರುವ ಯುವಕರನ್ನೊಳಗೊಂಡ ಮತ್ತು ಹಿರಿಯರನ್ನು ಸಮಿತಿಗೆ ಸೇರಿಸಿಕೊಂಡು ದೇಣಿಗೆ ಸಂಗ್ರಹದ ಜವಾಬ್ದಾರಿಯನ್ನು ವಹಿಸುವ ಚರ್ಚೆ ನಡೆಯಿತು.

ಈ ಸಭೆಯಲ್ಲಿ ತಾ.ಪಂ ಸದಸ್ಯ ಚಂದ್ರಮೌಳಿಗೌಡರ,ಎಪಿಎಂಸಿ ನಿರ್ದೇಶಕ ಹೆಚ್.ವಿ.ಈಶ್ವರಪ್ಪಗೌಡ, ಹುಗುಡಿ ವರ್ತೇಶ್‌ಗೌಡರು, ಸಹಕಾರ ಸಂಘದ ನಿರ್ದೇಶಕ ತಳಗಿಬೈಲು ವೀರಣ್ಣ, ರಾಜಶೇಖರ್ ಹೊಸನಗರ, ಬೆಳಕೋಡು ಹಾಲಸ್ವಾಮಿಗೌಡ, ದೂನ ಸೋಮಶೇಖರ್, ಜೆ.ಜಿ.ಸದಾನಂದ, ಶಿವಾನಂದ ಮುಂಬಾರು, ವೇದಾಂತಗೌಡರು, ಸುರೇಶ್‌ಗೌಡ, ನಾಗರಾಜ್‌ಗೌಡ, ವಾಗೇಶ್‌ಗೌಡ ಗಿಳಾಲಗುಂಡಿ, ಡಿ.ಈ.ಮಧುಸೂದನ್, ಈಶ್ವರಪ್ಪಗೌಡ ನೆವಟೂರು, ಹೆಚ್.ಎಸ್.ರವಿ ಹಾಲುಗುಡ್ಡೆ, ಶಿವಕುಮಾರ್ ಚನ್ನಕೊಪ್ಪ, ಬಸಪ್ಪ ಬೆಳಂದೂರು, ಮಲ್ಲೇಶ್ ಅಲುವಳ್ಳಿ, ಕೆ.ಆರ್.ನಾಗರಾಜ್ ಕುಕ್ಕಳಲೆ, ಪ್ರಕಾಶ್ ಕುಕ್ಕಳಲೆ, ಜಳಬೈಲು ಜೆ.ಬಿ.ಮಲ್ಲಿಕಾರ್ಜುನ, ಎಂ.ಆರ್.ಆಶೋಕ ಮಸರೂರು ಇನ್ನಿತರ ಹಲವರು ಹಾಜರಿದ್ದು.

ಜಾಹಿರಾತು

LEAVE A REPLY

Please enter your comment!
Please enter your name here